SUDDILIVE || SHIVAMOGGA
ಹಿಂಜಾವೇಯಿಂದ ಪಂಜಿನ ಮೆರವಣಿಗೆ-Torch procession from Hinjave
ಹಿಂದೂ ಜಾಗರಣ ವೇದಿಕೆ ಶಿಕಾರಿಪುರ ತಾಲೂಕು ಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಪಂಜನ್ನು ಹಿಡಿದು ಸ್ವತಂತ್ರಕ್ಕಾಗಿ ಹೋರಾಡಿದ ರಾಷ್ಟ್ರಭಕ್ತರಿಗೆ ಜೈಕಾರವನ್ನು ಹಾಕುತ್ತಾ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಶಿಕಾರಿಪುರ ನಗರದ ಮುಖ್ಯ ಬೀದಿಗಳಲ್ಲಿ ಹಾದು ಹೋಗಿ ಶಿವಗಿರಿ ಮಠದ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ವಿದ್ವಾನ್ ದಯಾನಂದ ಗಿರಿ ಸ್ವಾಮೀಜಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಠದಜಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ ಅರಳಿ ಹಳ್ಳಿ ರವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿದರು. ಹಿಂಜವೇ ಸಂಘಟನೆ ಕಾರ್ಯಕರ್ತರಾದ ಪ್ರದೀಪ್ ರಾಜ ಭಜರಂಗಿ ಪವನ ಸದ್ಗುಣ ಲೋಕೇಶ್ ಗಣೇಶ ಆಚಾರ್, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
Torch procession from Hinjave