SUDDILIVE || SHIVAMOGGA
ಆಟೋ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಅವಘಡ, ನೋಡುತ್ತಿದ್ದಂತೆ ಎರಡು ಕಾರು ಬೆಂಕಿಗೆ ಆಹುತಿ-Fire accident at auto complex, two cars caught fire
ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ನಲ್ಲಿರುವ ಗ್ಯಾರೇಜ್ ವೊಂದರಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಆಕಸ್ಮಿಕ ಬೆಂಕಿಯಿಂದಾಗಿ ಗ್ಯಾರೇಜ್ ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿರುವ ಸಾಧ್ಯತೆ ಕಂಡು ಬಂದಿದೆ.
ಆಟೋ ಕಾಂಪ್ಲೆಕ್ಸ್ ನಲ್ಲಿ ಮನು ಶೆಟ್ಟಿ ಗ್ಯಾರೇಜ್ ನಲ್ಲಿ ಈ ದಟ್ಟ ಹೊಗೆ ಕಾಣಿಸಿಕೊಂಡಿದೆ. ಗ್ಯಾರೇಜ್ ಇಂವತ್ತು ಭಾನುವಾರ ಆದುದರಿಂದ ಗ್ಯಾರೇಜ್ ಬಂದ್ ಮಾಡಲಾಗಿದ್ದು. ಬಂದ್ ಆದರೂ ಸಹ ಗ್ಯಾರೇಜ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯನ್ನ ಆರಿಸಲು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದೆ. ಬೆಂಕಿ ನಂದಿಸಲು ಯತ್ನಿಸಿದೆ. ಮಾಹಿತಿ ಪಡೆದ ಮೇಲೆ ಗ್ಯಾರೇಜ್ ನ ಮಾಲೀಕರು ಸಹ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ನಷ್ಟದ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.
ಡಸ್ಟರ್, ಇಕೋ ಸ್ಪೋರ್ಟ್ಸ್ ಕಾರುಗಳು ಸಂಪೂರ್ಣ ಹೊತ್ತಿಉರಿದರೆ, ಟಾಟಾ ಸುಮೋ ವಾಹನ ಅರ್ದಂಬರ್ಧ ಕರಕಲಾಗಿವೆ ಎಂದು ಸ್ಥಳೀಯರು ಸುದ್ದಿಲೈವ್ ಗೆ ಮಾಹಿತಿ ನಢಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಈ ಅವಘಡಸಂಭವಿಸಿದೆ.
two cars caught fire