ಬೇಡಿಕೆ ಈಡೇರದಿದ್ದರೆ ಆ.5 ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ- Transport employees to go on indefinite strike from August 5

 SUDDILIVE || SHIVAMOGGA

ಬೇಡಿಕೆ ಈಡೇರದಿದ್ದರೆ ಆ.5 ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ-Transport employees to go on indefinite strike from August 5 if demand is not met

Transport, strike


ನಾಲ್ಕು ನಿಗಮಗಳ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 5 ರಿಂದ 2025  ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನ ಕ.ರಾ.ರಾ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.  

ರಾಜ್ಯ ಸನಿತು ಉಪಾಧ್ಯಕ್ಷರಾದ ಎಂ ಮಹಾದೇವ್ ಸುದ್ದಿಗೋಷ್ಠಿ ನಡೆಸಿ 2023 ರಲ್ಲಿ 15% ಸಂಬಳ ಹೆಚ್ಚಾಯಿತು. 38 ನೇ ಅರಿಯಸ್ ಹಾಗೆ ಉಳಿಯಿತು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 1957 ರಿಂದ ಕೈಗಾರಿಕಾ ಒಪ್ಪಂದ ಜಾರಿಯಾಗಿತ್ತು. ನಾಲ್ಕು ವರ್ಷಕ್ಕೊಮ್ಮೆ ಜಾರಿಯಾಗುವಂತೆ ಸಿದ್ದರಾಮಯ್ಯ ನವರ ಕಾಲದಿನಿಂದ ಜಾರಿಯಾಗಿತ್ತು. ಪ್ರಯಾಣಿಕರ ದರ ಹೆಚ್ಚಳದಿಂದ ನೌಕರರ ಸಂಬಳ ಹೆಚ್ಚಿಸಬಹುದಾಗಿದೆ ಎಂದು ಜಂಟಿ ಸಲಹ ಸಮಹಿತಿ ಒತ್ತಾಯಿಸಿತ್ತು. 

ಬೆಳವಾವಿ ಚಲೋ ಹಮ್ಮಿಕೊಂಡಿತ್ತು. ಸಚಿವ ದಿನೇಶ್ ಗುಂಡೂರಾವ್ ಬಂದು ಮನವಿ ಸ್ವೀಕರಿಸಿದ್ದರು. 2024 ರಲ್ಲಿ ಸಿಎಂ ಮುಷ್ಕರ ನೌಕರರ ಸಭೆಯನ್ನ ಕರೆಯುವುದಾಗಿ  ನಾಲ್ಕು ತಿಂಗಳ ವರೆಗೆ ನಡೆಸಲಿಲ್ಲ. ಏಪ್ರಿಲ್ ನಲ್ಲಿ ನಡೆದ ಸಭೆ ನಡೆಸಿ ನೌಕರರ ಬೇಡಿಕೆ ಈಡೇರಿಸುವುದಾಗಿ ಹೇಳಿದ ಸಿದ್ದರಾಮಯ್ಯ ನಂತರ ಉಲ್ಟಾ ಹೊಡೆದರು. 

ಜುಲೈ 31 ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಿ 1/01/2020 ರಿಂದ ಶೇ 15 ರ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣವನ್ನ ರಾಜ್ಯ ಸರ್ಕಾರ ಕೂಡಲೇ ಪಾವತಿಸಬೇಕು. 2023 ರ ಡಿ.31 ರಲ್ಲಿದ್ದ ಸಾರಿಗೆ ನೌಕರರ ಮೂಲ ವೇತನಕ್ಕೆ ಶೇ.31 ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ ದಿನಾಂಕ 1/1/2024 ರಿಂದ ಶೇ.25 ರಷ್ಟು ವೇತನ ಹೆಚ್ಚಿಸಬೇಕು. 

ಒಂದು ಆ.4 ರ ಒಳಗೆ ಸರ್ಕಾರ ಜಂಟಿ ಕ್ರಿಯಾ ಸಮಿತಿಯ ಜೊತೆ ಚರ್ಚಿಸಿ ಸಾರಿಗೆ ಆಡಳಿತ ಮಂಡಳಿಯ ಮಟ್ಟದಲ್ಲಿ ಬಗೆಹರಿಸದಿದ್ದಲ್ಲಿ ಆ.5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದರು. 

Transport employees to go on indefinite strike from August 5

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close