ad

ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗಕ್ಕೆ ತಿಲಾಂಜಲಿ-Tribute to the Shimoga-Harihar railway line

 SUDDILIVE || NEW DEHALI

ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗಕ್ಕೆ ತಿಲಾಂಜಲಿ-Tribute to the Shimoga-Harihar railway line

Shivogga, harihara


ಶಿವಮೊಗ್ಗ -ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಕಡಿತಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು 79 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ 832 ಕೋಟಿ ವೆಚ್ಚ ತಗುಲಲಿದೆ. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ 

ಯೋಜನೆಗೆ ಅಗತ್ಯವಿರುವ 488 ಹೆಕ್ಟರ್ ಜಾಗವನ್ನು ರಾಜ್ಯ ಸರ್ಕಾರ ಉಚಿತವಾಗಿ ಸ್ವಾಧೀನ ಪಡಿಸಿ ಹಸ್ತಂತರಿಸಬೇಕು ಬರಿಸಬೇಕು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಈಗ ರಾಜ್ಯ ಸರ್ಕಾರ ಒಪ್ಪಂದದಿಂದ ಹಿಂದಕ್ಕೆ ಸರದಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗದ ಕನಸು ನಿನ್ನೆ ಮೊನ್ನೆಯದಲ್ಲ. ಒಂದು ಕಡೆ ಈ ಯೋಜನೆಯನ್ನ ಹೈಜಾಕ್ ಮಾಡಿ ರಾಣೆಬೆನ್ನೂರಿಗೆ ಕರೆದೊಯ್ಯಲಾಗಿತ್ತು. ಆದರೂ ಸಹ ಈ ಯೋಜನೆಯನ್ನ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈಗ ರಾಜ್ಯ ಸರ್ಕಾರದ ಈ ನಡೆ ಮತ್ತು ಹಿತಾಸಕ್ತಿ ಕೊರೆತೆಯೂ ಸಹ ಇಲ್ಲವಾದುದರಿಂದ ಅನೇಕ ವರ್ಷಗಳ ಕನಸು ಹಾಗೆ ಕನಸಾಗೆ ಉಳಿದಿದೆ. 

Tribute to the Shimoga-Harihar railway line

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close