SUDDILIVE || SHIVAMOGGA
ಇನ್ನು ಒಂದುವರೆ ತಿಂಗಳಲ್ಲಿ ಊರುಗಡೂರು ಸೈಟ್ ಹಂಚಿಕೆ- Urugadur site allocation in a month and a half
ಸೂಡಾದಿಂದ ಅಭಿವೃದ್ಧಿಗಾಗಿ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಊರಗಡೂರಿನಲ್ಲಿ ಕಳೆದ 10 ತಿಂಗಳ ಹಿಂದೆ ಕರೆದಿದ್ದ ಸೈಟ್ ಗಳ ಅರ್ಜಿಯನ್ನ ಇನ್ನು ಒಂದುವರೆ ತಿಂಗಳಲ್ಲಿ ಹಂಚಲಾಗುವುದು ಎಂದು ಸೂಡಾ ಅಧ್ಯಕ್ಷ ಸುಂದರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪಿ ಶೆಟ್ಟಿಯಲ್ಲಿ 104 ಎಕರೆಯಲ್ಲಿ 30 ಎಕರೆಯನ್ನ ವಶಕ್ಕೆ ಪಡೆಯಲಾಗುತ್ತಿದೆ. ಫೋರ್ ಒನ್ ಆಗಿ 15 ವರ್ಷವಾಗಿತ್ತು. ಈಗ ಸಿಕ್ಸ ಒನ್ ಆಗಬೇಕು ಆಗ ಮಾತ್ರ 50-50 ಅನುಪಾತದಲ್ಲಿ ಪರಿಹಾರ ನೀಡಿ ಸೈಟ್ ಹಂಚಲಾಗುತ್ತದೆ ಎಂದರು.
ನಿಧಿಗೆಯಲ್ಲಿ ಮೂರು ಎಕರೆ ಜಮೀನು ಪಡೆಯಲಾಗಿದೆ. ಸೋಮಿನಕೊಪ್ಪದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಲೇಔಟ್ ಗಳನ್ನ ಮಾಡಲಾಗಿದೆ ಸೋಗಾನೆಯಲ್ಲಿ 100 ಎಕರೆ ಪಡೆಯಲಾಗುತ್ತದೆ. ಡಿಸಿಗೆ ಸರ್ಕಾರ ಪತ್ರಬರೆದಿದೆ. ಸರ್ಕಾರ ಡಿಸಿಗೆ ಕ್ರಮಕೈಗೊಳ್ಳಲು ಸೂಚಿಸಿದೆ. ಇದರಿಂದ 70-80 ಎಕರೆ ನಿವೇಶನ ಮಾಡಲು ಅವಕಾಶ ದೊರೆಯಲಿದೆ ಎಂದರು.
ಭದ್ರಾವತಿಯಲ್ಲಿ 34 ಎಕರೆ ಸಿಕ್ಸ್ ಒನ್ ಆಗಿದೆ. ಆಗಿನ ದರವನ್ನ ನ್ಯಾಯಾಲಯಕ್ಕೆ ಹಿಂದೆಯಕಟ್ಟಲಾಗಿದೆ. 35 ಪಾರ್ಕ್ ಗಳನ್ನ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಗುರುತಿಸಲಾಗಿದೆ. 45 ಪಾರ್ಕ್ ಗೆ ಟೆಂಡರ್ ಕರೆಯಲಾಗುತ್ತಿದೆ. ಶಿವಮೊಗ್ಗದಲ್ಲಿ 25 ಆಟೋ ನಿಲ್ದಾಣಗಳ ಗುರುತಿಸಿ ನಿರ್ಮಿಸಲಾಗುತ್ತಿದೆ. ಕೆರೆಗಳನ್ನ ಸೂಡದಿಂದ 50 ಕೋಟಿ ವೆಚ್ಚದಲ್ಲಿ 26 ಕೆರೆಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಮೊದಲ ಹಂತವಾಗಿ ನಾಲ್ಕು ಕೆರೆಗೆ ಟೆಂಡರ್ ಕರೆಯಲಾಗಿದೆ ಎಂದರು.
ಸೋಮಿನಕೊಪ್ಪದಲ್ಲಿ 1½ ಎಕರೆಯಲ್ಲಿ ಅಪಾರ್ಟ್ ಮೆಂಟ್ ಕಟ್ಟಲಾಗುತ್ತಿದೆ. ಔಟ್ ರೇಟ್ ಗೆ ಪರ್ಚೇಸ್ ಮಾಡಲಾಗುತ್ತಿದೆ. ನಿವೇಶನ ಹಂಚಲು ತಡವಾಗುತ್ತಿದೆ. ಹಾಗಾಗಿ ಸರ್ಕಾರದ ವತಿಯಿಂದ ಅಪಾರ್ಟ್ ಮೆಂಟ್ ಕಟ್ಟಲಾಗುತ್ತಿದೆ. ಊರುಗಡೂರಿನಲ್ಲಿ 4 ಎಕರೆ ಮಾಡಲಾಗುತ್ತಿದೆ. ವಾಣಿಜ್ಯ ಸಂಕೀರ್ಣ ಸಹ ನಿರ್ಮಿಸಲು ಗುರಿಹೊಂದಲಾಗಿದೆ ಎಂದರು.
ಆಡಳಿತ ಕಚೇರಿಯ ಬಿಲ್ಡಿಂಗ್ ನ್ನ 10 ಕೋಟಿಯಲ್ಲಿ ಜಾಗ ಗುರುತಿಸಿ ಕಟ್ಟಲಾಗುತ್ತಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಮಾಲ್ ನಿರ್ಮಿಸಲಾಗುತ್ತಿದೆ. ಹೊರವರ್ತುಲ ರಸ್ತೆ ಅಭಿವೃಧ್ಧಿ ಮತ್ತು ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅನಧಿಕೃತ ಬಡಾವಣೆ ಗುರತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಊರಗಡೂರು ಸೈಟ್ ಗಳನ್ನ ಇನ್ನು ಒಂದು ವರೆ ತಿಂಗಳಲ್ಲಿ ಹಂಚಲಾಗುತ್ತದೆ. 12000 ಅರ್ಜಿಗಳು ಬಂದಿದ್ದು 7 ಸಾವಿರ ಅರ್ಜಿ ಅರ್ಹತೆ ಪಡೆದಿದೆ. 437 ಸೈಟ್ ಗಳಿದ್ದು ಸೀನಿಯಾರಿಟಿ ಮೇಲೆ ಕೋಟಾ ಅಡಿ ಹಂಚಲಾಗುತ್ತದೆ ಎಂದ ಅವರು ವಾಜಪೇಯಿ ಲೇ ಔಟ್ 288 ಸೈಟುಗಳನ್ನ ತಡೆಹಿಡಿಯಲಾಗಿದೆ. ಸರ್ಕಾರದ ಮುಙದಿನ ನಿರ್ದೇಶನಕ್ಕೆ ಕಾಯಲಾಗುತ್ತಿದ್ದು ನಂತರ ಅದನ್ನ ಹಂಚಲಾಗುವುದು ಎಂದರು.
Urugadur site allocation in a month and a half