SUDDILIVE || BHADRAVATHI
ಭದ್ರಾವತಿ ಬಳಿ ಚಲಿಸುತ್ತಿದ್ದ ರೈಲಿನಿಂದ ಧುಮುಕಿದ್ದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲು, ರಸ್ತೆ ಅಪಘಾತದಲ್ಲಿ ದಂಪತಿಗಳಿಗೆ ತೀವ್ರ ಗಾಯ-Man who jumped from moving train near Bhadravati admitted to hospital again, couple seriously injured in road accident
ಭದ್ರಾವತಿ ತಾಲೂಕಿನಲ್ಲಿ ಮೂವರು ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಇಬ್ವರು ರಸ್ತೆ ಅಪಘಾತದಲ್ಲಿ ಶಿವಮೊಗ್ದದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿ ತಾಲೂಕಿನ ಕಾರೇಹಳ್ಳಿ ನಿವಾಸಿಗಳು ತರೀಕೆರೆ ಅಜ್ಜಂಪುರ ಕಡೆಗೆ ಓಮ್ನಿ ವಾಹನದಲ್ಲಿ ಹೋಗುವಾಗ ಗಂಟೆಕಣಿವೆಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಟೋಲ್ ಬಳಿ ಲಾರಿಯೊಂದಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿಯಲ್ಲಿ ದಂಪತಿಗಳಿಬ್ಬರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನ ಶಾಲಿನಿ ಮತ್ತು ವಸಂತ್ ಎಂದು ಗುರುತಿಸಲಾಗಿದೆ.
ವಸಂತ್ ತೀವ್ರವಾಗಿ ಗಾಯಗೊಂಡಿದ್ದರಿಂದ ಮೆಗ್ಗಾನ್ ಗೆ ಸಾಗಿಸಕಾಗಿತ್ತು. ನಂತರ ದಂಪತಿಗಳಿಬ್ವರನ್ನೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![]() |
ರಸ್ತೆ ಅಪಘಾತದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹಾರಿದ್ದ ಗಾಯಗೊಂಡ ಮಹಿಳೆ ಮಲ್ಲೇಶ |
ರೈಲಿನಿಂದ ಜಂಪ್ ಆದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲು
ಕಳೆದ ಒಂದು ವಾರದ ಹಿಂದೆ ಭದ್ರಾವತಿ ತಾಲೂಕಿನ ಮೊಸರುಹಳ್ಳಿಯ ಬಳಿ ರನ್ನಿಂಗ್ ಟ್ರೈನ್ ನಿಂದ ವ್ಯಕ್ತಿಯೊಬ್ಬ ಜಂಪ್ ಆಗಿದ್ದ. ಮೆಗ್ಗಾನ್ ನಲ್ಲಿ ರೈಲ್ವೆ ಪೊಲೀಸರು ಚಿಕಿತ್ಸೆ ನೀಡಿದ್ದು ಎರಡೇ ದಿನಕ್ಕೆ ಮೆಗ್ಗಾನ್ ನಿಂದ ಎಸ್ಕೇಪ್ ಆಗಿದ್ದ. ಇಂದು ಮತ್ತೆ ಸಮಸ್ಯೆಯಾಗುತ್ತಿದೆ ಎಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ.
ಜಿಂಕ್ ಲೈನ್ ನ ನಿವಾಸಿ ಮಲ್ಲೇಶ್ ಎಂಬ 43 ವರ್ಷದ ವ್ಯಕ್ತಿ ಮೊಸರುಹಳ್ಳಿಯ ಬಳಿ ಚಲಿಸುತ್ತಿದ್ದ ರೈಲಿನಿಂದ ಧುಮುಕಿ ತಲೆಗೆ ಮೈಕೈಗೆ ಗಾಯಗೊಂಡಿದ್ದ. ಮದ್ಯದ ನಶೆಗೆ ಈ ವ್ಯಕ್ತಿ ರೈಲಿನಿಂದ ಜಂಪ್ ಆದ ಪರಿಣಾಮ ತೀವ್ರಗಾಯಗೊಂಡಿದ್ದ ಆತನನ್ನ ರೈಲ್ವೆ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಮೆಗ್ಗಾನ್ ನಲ್ಲಿ ಎರಡು ದಿನ ಇದ್ದು ಎಸ್ಕೇಪ್ ಆಗಿದ್ದ. ಇಂದು ಮತ್ತೆ ತಲೆನೋವು ಮತ್ತಿತರೆ ಸಮಸ್ಯೆ ಕಾಣಿಸಿಕೊಂಡು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
jumped from moving train near Bhadravati admitted to hospital again