ad

ನೀರಿಗೆ ವಿಷಬೆರಕೆ ಪ್ರಕರಣ- ಚುರುಕುಗೊಂಡ ತನಿಖೆ-Water poisoning case - Investigation intensified

 SUDDILIVE || HOSANAGA

ನೀರಿಗೆ ವಿಷಬೆರಕೆ ಪ್ರಕರಣ- ಚುರುಕುಗೊಂಡ ತನಿಖೆ-Water poisoning case - Investigation intensified

Water, poisoning


ಹೊಸನಗರ ತಾಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರವರ ಅದೇಶ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ಪೊಲೀಸರು ಫುಲ್ ಅಲರ್ಟ್ ಆಗಿದ್ದು  ವಿವಿಧ ರೀತಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಭೇದಿಸಲು ಮೂರು ತಂಡಗಳ ರಚನೆಯನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಡಿದ್ದು ತನಿಖೆಗಾಗಿ ಒಟ್ಟು 18 ಪೊಲೀಸರ ನಿಯೋಜನೆ ಮಾಡಲಾಗಿದೆ. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ತಂಡ ರಚನೆ ಆಗಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಲು ಪೊಲೀಸರು ಮುಂದಾಗಿದ್ದಾರೆ. ಟವರ್ ಡಂಪ್ ಮೂಲಕ ತನಿಖೆ ಆರಂಭ ಮಾಡಿದ್ದು

ಟವರ್ ಡಂಪ್ ಹಾಗೂ ಸಿಸಿ ಟಿವಿ ಪರಿಶೀಲನೆಗೆ ಐದು ಪೊಲೀಸರ ನಿಯೋಜನೆ ಹಾಗೂ ಹೂವಿನಕೋಣೆ ಗ್ರಾಮದ ಸುತ್ತಮುಲ್ಲಿ ದೊರೆಯುವ ಮಾಹಿತಿ ಸಂಗ್ರಹಣೆಗಾಗಿ ಎಂಟು ಸಿಬ್ಬಂದಿಗಳ ನಿಯೋಜನೆ ಹಾಗೂ ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆಗಾಗಿ ಐದು ಪೊಲೀಸರ ನಿಯೋಜನೆ ಮಾಡಲಾಗಿದೆ. ಇಂದು ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಜಿಕೆ ಮಿಥುನ್ ಕುಮಾರ್ ಭೇಟಿ ನೀಡಲಿದ್ದಾರೆ. ಪ್ರಕರಣ ಭೇಧಿಸಲು ಜಿಲ್ಲೆಯ 18 ಪೊಲೀಸರ ಬಳಕೆ ಮಾಡಲಾಗಿದೆ.

Water poisoning case - Investigation intensified


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close