SUDDILIVE || SHIVAMOGGA
ಜೈಲಿನಲ್ಲಿ ಖೈದಿ ಆತ್ಮಹತ್ಯೆ-Prisoner commits suicide in jail
![]() |
| ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ ಬಸವರಾಜ್ ಮತ್ತು ಕೊಲೆಯಾದ ಮಂಜುಳರ ಮದುವೆ ಫೊಟೊ |
ಜೈಲಿನಲ್ಲಿದ್ದ ಖೈದಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಬಸವರಾಜ್ ಎಂಬ 38 ವರ್ಷದ ಖೈದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಪತ್ನಿಯ ಕೊಲೆ ಆರೋಪ ಆತನ ಮೇಲಿದ್ದು ಆತನನ್ನ ಜೂನ್ 13 ರಂದು ಶಿವಮೊಗ್ಗ ಜೈಲಿನಲ್ಲಿ ಹಾಕಲಾಗಿತ್ತು.
ಶರಾವತಿ ವಾರ್ಡ್ ಕೊಠಡಿ 42 ರಲ್ಲಿದ್ದ ಬಸವರಾಜ್ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊನಡಿದ್ದಾನೆ. ಮೆಗ್ಗಾನ್ ಆಸ್ಪತ್ರೆಗೆ ಆತನ ಮೃತದೇಹವನ್ನ ಸಾಗಿಸಲಾಗಿದೆ.
ಪ್ರಕರಣ ಏನಾಗಿತ್ತು?
ಕೌಟುಂಬಿಕ ಕಲಹದ ಹಿನ್ನೆಲೆ ಚಿಮುಟ ಬಳಸಿ ಗಂಡನೇ ಹೆಂಡತಿಯ ಹತ್ಯೆ ಮಾಡಿ ಪತಿ ತಲೆಮರೆಸಿಕೊಂಡಿದ್ದ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿತ್ತು. ಈ ಘಟನೆ ಜೂನ್ 12 ರಂದು ನಡೆದಿತ್ತು.
ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಹತ್ಯೆ ಮಾಡಿದ್ದಾನೆ. ಚಿಮುಟದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದನು. ಕುಡಿತದಲ್ಲಿದ್ದ ಬಸವರಾಜು ಪತ್ನಿಯ ನಡುವಿನ ಜಗಳವಾಡುತ್ತಿದ್ದನು.
ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 11 ರಂದು ಪ್ರಕರಣ ವಿಕೋಪಕ್ಕೆ ಹೋದ ಪರಿಣಾಮ ಹೆಂಡತಿಯ ಹತ್ಯೆ ನಡೆದಿದೆ. ಪ್ರಕರಣ ಶಿಕಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು.
ಬಸವರಾಜ್ ಚಿತ್ರದುರ್ಗ ಹೊಳಲ್ಕೆರೆ ನಿವಾಸಿಯಾಗಿದ್ದು ಬಳ್ಳಾರಿ ಮೈನ್ಸ್ ಲಾರಿ ಚಾಲಕನಾಗಿದ್ದ.
Prisoner commits suicide in jail
