ad

ನೀರು ಲೋಡು ಮಾಡಿಕೊಂಡು ಬಿಡಲು ದಾಡಿ ಏನು ನಿಮಗೆ? ಶಾಸಕ ಚೆನ್ನಿ ಗರಂ-What is the trick to release water...? MLA Chenni Garam

 SUDDILIVE || SHIVAMOGGA

ನೀರು ಲೋಡು ಮಾಡಿಕೊಂಡು ಬಿಡಲು ಏನು ದಾಡಿ...?ನೀರು ಲೋಡು ಮಾಡಿಕೊಂಡು ಬಿಡಲು ದಾಡಿ ಏನು ನಿಮಗೆ? ಶಾಸಕ ಚೆನ್ನಿ ಗರಂ-What is the trick to release water...? MLA Chenni Garam

MLA, chennabasappa


ಟ್ಯಾಂಕ್ ಗೆ ನೀರು ತುಂಬಿಸಿ ಹಂಚಲು ನಿಮಗೇನು ದಾಡಿ ಎಂದು ಶಾಸಕ ಚೆನ್ನಬಸಪ್ಪ ಕೆಂಡಮಂಡಲರಾಗಿದ್ದಾರೆ. ಈ ಮಾತನ್ನ ಸಾರ್ವಜನಿಕವಾಗಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿ ಜೀವನ್ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಕರು ಅಧಿಕಾರಿಗಳ ವಿರುದ್ಧ ತರಾಟೆಗೆ ತೆಗೆದುಕೊಳ್ಳಲು ಕಾರಣವೂ ಇದೆ.

ವಿನೋಬನಗರದ ಶಿವಾಲಯ ದೇವಸ್ಥಾನದ ಹಿಂಬದಿಯ ನಿವಾಸಿಗಳಿಗೆ ಕಳೆದ 9 ತಿಂಗಳಿಂದ ಸಮರ್ಪಕ ನೀರು ಹರಿಸುತ್ತಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಈ ಕೂಗಿಗೆ ಸ್ಪಂಧಿಸದ ಅಧಿಕಾರಿಗಳ ವರ್ತನೆಗೆ ಬೇಸತ್ತು ಸ್ಥಳೀಯರು ಶಾಸಕರ ಬಳಿ ತಮ್ಮ ನಿವೇದನೆಯನ್ನ ಹೇಳಿಕೊಂಡಿದ್ದಾರೆ. ಅಷ್ಟೆ, ಇಂದು ಬೆಳಿಗ್ಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನ ಮೇಲಿನಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.


 

ನಗರ ಸ್ಮಾರ್ಟ್ ಸಿಟಿ ಆದಾಗಿನಿಂದ ಕುಡಿಯುವ ನೀರಾದರೂ ಸಮರ್ಪಕವಾಗಿ ಸರಬರಾಜು ಆಗಬೇಕಿತ್ತು. ಆದರೆ ಬಹುತೇಕ ಬಡಾವಣೆಗಳು ಮೂಲಬೂತ ಸೌಕರ್ಯ ಗಳಲ್ಲಿ ಒಂದಾದ ನೀರು ಸಹ ಸರಬರಾಜು ಆಗದ ಹಿನ್ನಲೆಯಲ್ಲಿ ಶಾಸಕರ ಈ ಕೋಪ ಎಷ್ಟರ ಮಟ್ಟಿಗೆ ವರ್ಕ್ ಆಗಲಿದೆ ಕಾದು ನೋಡಬೇಕಿದೆ. 

ವಿನೋಬನಗರದ 60 ಅಡಿ ರಸ್ತೆಯ 1 ನೇ ತಿರುವಿನಿಂದ 4 ನೇ ತಿರುವಿನ ನಿವಾಸಿಗಳು ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ. ಇಲ್ಲಿ 5 ಲಕ್ಷ ಗ್ಯಾಲನ್ ವಾಟರ್ ಟ್ಯಾಂಕ್ ಇದೆ. ಈ ವಾಟರ್ ಟ್ಯಾಂಕ್ ಇದ್ದರೂ ನೀರು ಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. 24×7 ಯೋಜನೆ ಜಾರಿಯಾಗುವ ಮುಂಚೆ ನೀರು ಈ ಬಡಾವಣೆಯಲ್ಲಿ ಸಮರ್ಪಕವಾಗಿ ಹಂಚಲಾಗುತ್ತಿತ್ತು. ಈಗ ಆ ನೀರು ಬರುತ್ತಿಲ್ಲ ಯಾಕೆ? ನೀರು ಲೋಡು ಮಾಡಿಕೊಂಡು ಕೊಡಲು ದಾಡಿ ಏನು ನಿಮಗೆ ಎಂದು ಶಾಸಕರು ಗರಂ ಆಗಿದ್ದಾರೆ. 

 ಇನ್ನೊಂದು ವಾರ ಬಿಟ್ಟುಕೊಂಡು ಸ್ಥಳಕ್ಕೆ ಭೇಟಿ ನೀಡುತ್ತೇನೆ. ನೀರು ಬಂದರೆ ಸರಿ ಇಲ್ಲವಾದಲ್ಲಿ ಮುಂದಿನದ್ದು ಮುಂದೆ ಎಂದು ಶಾಸಕರು ಎಚ್ಚರಿಸಿ ಹೋಗಿದ್ದಾರೆ. 

What is the trick to release water...? MLA Chenni Garam


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close