ad

ಹಿಂದೂ ಎಂದು ಭಯೋತ್ಪಾಧನೆ ಮಾಡಲಾರ-ಶಾಸಕ ಚೆನ್ನಬಸಪ್ಪ- One cannot commit terrorism just because he is a Hindu - MLA Chennabasappa

SUDDILIVE || SHIVAMOGGA

ಹಿಂದೂ ಎಂದು ಭಯೋತ್ಪಾಧನೆ ಮಾಡಲಾರ-ಶಾಸಕ ಚೆನ್ನಬಸಪ್ಪ-One cannot commit terrorism just because he is a Hindu - MLA Chennabasappa

Hindu, terrorism

ಮಾಲೆಗಾಂವ್ ಸ್ಫೋಟದ 7 ಜನ ಆರೋಪಿಗಳನ್ನ ನಿನ್ನೆ ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ್ದು, ಈ ಬಗ್ಗೆ ಶಾಸಕ ಚೆನ್ನ ಬಸಪ್ಪ ಪ್ರತಿಕ್ರಿಯಿಸಿದ್ದಾರೆ.  ಹಾಗೂ ಹಿಂದೂ ಭಯೋತ್ಪಾದನೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ತುಳಿಯುವಂತಹ ಪ್ರಯತ್ನ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆರ್.ಎಸ್.ಎಸ್. ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತೆ ಹೊರತು ಭಯೋತ್ಪಾದನಾ ಚಟುವಟಿಕೆ ನಡೆಸಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಆರ್.ಎಸ್.ಎಸ್. ದೇಶ ಕಟ್ಟುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಕೇವಲ ಚುನಾವಣೆಗಾಗಿ ಗಿಮಿಕ್ ಮಾಡಿಕೊಂಡು ಬಂದಿದೆ. ಮತಕ್ಕಾಗಿ ಮುಸಲ್ಮಾನ್ ಓಲೈಕೆ ಮಾಡಿಕೊಂಡು ಬಂದಿದೆ. ಈ ದೇಶದ ದುರ್ಧೈವದ ಸಂಗತಿ ಇದು. ಹಿಂದೂ ರಾಷ್ಟ್ರ ಎಂದು ಕರೆದ ಜನರಿಗೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು. 

ಹಿಂದೂಗಳ ದಮನ ಮಾಡಬೆಕು ಎನ್ನುವುದು ಬಹಳ ಹಿಂದಿನಿಂದ ನಡೆದು ಬಂದ ದಾರಿಯಾಗಿದೆ. ಮಾಲೆಗಾಂವ್ ಸ್ಪೋಟದಲ್ಲಿ ಪ್ರಜ್ಞಾ ಸಿಂಗ್ ಅವರನ್ನು ದೋಷಿ ಎಂದು ತೀರ್ಮಾನಿಸಲಾಗಿತ್ತು. ಸ್ಪೋಟ ಮಾಡಿದ್ದೇವೆ ಎಂದು ಅನೇಕ ಮುಸ್ಲಿಂ ಸಂಘಟನೆಗಳು ಹೇಳಿದ್ರು, ಪ್ರಜ್ಞಾ ಸಿಂಗ್ ಬಂಧಿಸುವ ಕೃತ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಗಿತ್ತು ಎಂದರು. 

ಹಿಂದೂ ಭಯೋತ್ಪಾಧನೆ ಹುಟ್ಟು ಹಾಕುವ ಕೆಲಸ ಕಾಂಗ್ರೆಸ್ ನಾಯಕರು ಮಾಡಿದ್ದರು. ಹಿಂದೂ ಎಂದು ಭಯೋತ್ಪಾಧನೆ ಮಾಡಲಾರ, ಹಿಂದೂತ್ವ ಅಂದರೆ ಕೋಮು ಜಾತಿ ಅಲ್ಲ ಇದೊಂದು ಜೀವನ ಪದ್ದತಿ. ಹಿಂದೂಗಳು ಭಯೋತ್ಪಾದಕರಲ್ಲ ಎಂದು ನ್ಯಾಯಾಲಯ ಹೇಳಿದೆ. ಕಾಂಗ್ರೆಸ್ ನ ಕೃತ್ಯ ಇಂದು ಬಯಲಾಗಿದೆ. ಹಿಂದೂಗಳಿಗೆ ಈ ಪ್ರಕರಣದಲ್ಲಿ ನ್ಯಾಯ ಸಿಕ್ಕಿದೆ ಎಂದರು. 

ಪ್ರಜ್ಞಾಸಿಂಗ್ ಎನ್ನುವ ಹಿಂದೂ ಮಹಿಳೆಗೆ ಹಿಂಸೆ ಕೊಟ್ಟರು. ದೇಶಪ್ರೇಮ ಇರುವ ಹೆಣ್ಣುಮಗಳನ್ನ ಈ ಪರಿಸ್ಥಿತಿಗೆ ತಂದಿದ್ದರು. ಕಾಂಗ್ರೆಸ್ ಆರೋಪ ಮಾಡುವುದನ್ನ ಬಿಟ್ಟರೆ ಎಲ್ಲವನ್ನು ಸರಿ ಮಾಡುವ ಕೆಲಸ ಮಾಡಲಿಲ್ಲ. ಆರ್ ಎಸ್ ಎಸ್ ಮೇಲೆ ಕೇವಲ ಆರೋಪ ಮಾಡುವುದೆ ಆಗಿದೆ. ಆರ್ ಎಸ್ ಎಸ್ ದೂರುವುದರಿಂದ ಕಾಂಗ್ರೆಸ್ ಹೊಟ್ಟೆ ತುಂಬುತ್ತದೆ. ಇದನ್ನು ಅನೇಕ ನಾಯಕರುಗಳೇ ಒಪ್ಪಿಕೊಂಡಿದ್ದಾರೆ ಎಂದರು. 

One cannot commit terrorism just because he is a Hindu - MLA Chennabasappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close