SUDDILIVE || SHIVAMOGGA
ಅಡಿಕೆ ಬಗ್ಗೆ ಅಪಪ್ರಚಾರ ತಡೆಯುವ ನಿಟ್ಟಿನಲ್ಲಿ ಪ್ರಯತ್ನ, ನನ್ನ ಕ್ಷೇತ್ರದ ಎರಡು ಜಾಗದಲ್ಲಿ ಏರೋಡ್ರಮ್ ನಿರ್ಮಾಣ-In an effort to stop misinformation about areca nut, aerodromes are being built in two places in my constituency
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಚರ್ಚೆಗೆ ಫುಲ್ ಸ್ಟಾಪ್ ಇಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಹಾಗೂ ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಎರಡು ಕಡೆ ಏರೀಡ್ರಮ್ ನಿರ್ಮಿಸುವ ಬಗ್ಗೆ ಕೆಲಸ ಬಡೆಯುತ್ತಿದೆ ಎಂದು ಸಂಸದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದ ಕಾಗೇರಿ ಅವರ ನೇತೃತ್ವದಲ್ಲಿ ನಾನು, ಸಚಿವರಾದ ಕುಮಾರ ಸ್ವಾಮಿ, ಶೋಭಾ ಕರದ್ಲಾಂಜೆ, ಮೊದಲಾದವರೊಂದಿಗೆ ಕೇಂದ್ರದ ಕೃಷಿ ಸಚಿವರಿಗೆ ಭೇಟಿ ಮಾಡಲಾಗಿತ್ತು. ಮೂರು ರಿಂದ 6 ತಿಂಗಳ ಒಳಗೆ ಇದರ ಬಗ್ಗೆ ಸಂಶೋಧನೆ ನಡೆಸಲು ಕೇಂದ್ರ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು. ನುಸಿರೋಗದ ಬಗ್ಗೆ ಸಂಶೋಧನೆ, ಸ್ಪ್ರೇ ಮತ್ತು ನಷ್ಠ ಭರಿಸುವ ಬಗ್ಗೆ ಪ್ರಯತ್ನ ಮಾಡಲಾಗಿದೆ. ಅಡಿಕೆಯ ಮೋಯಿಶ್ಚಯರ್ 7% ಇರಬೇಕು ಎಂದು ಕೇಂದ್ರ ಹೇಳಿದೆ. ಆದರೆ 12-13 % ಮೋಯಿಶ್ಚರ್ ನ್ನ ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಮೋಯಿಶ್ಚರ್ ಇಲ್ಲದಿದ್ದರೆ ತಿರಸ್ಕರಿಸುವ ಸಾಧ್ಯತೆಯೂ ಇದೆ. ಹಾಗಾಗಿ ಮೋಯಿಶ್ಚರ್ ಪಾಯಿಂಟ್ ನ್ನ 12-13% ರಷ್ಟೇ ಇಡುವಂತೆ ಕೋರಲಾಯಿತು. ದೊಡ್ಡ ಅಡಿಜೆ ಮತ್ತುಸಣ್ಣ ಅಡಿಕೆಯೆಂದು ಪರಿಗಣಿಸದೆ ಎಲ್ಲಾ ಅಡಿಕೆಯನ್ನ ಒಂದೇ ರೀತಿಯಲ್ಲಿ ಪರಿಗಣಿಸಬೇಕು ಎಂಬ ಬೇಡಿಯನ್ನೂ ಇಡಲಾಗಿದೆ ಎಂದರು.
ಅಕ್ರಮ ಅಡಿಕೆ ಸಾಗಾಣಿಕೆಯನ್ನ ತಡೆಯಬೇಕು. ಅಡಿಕೆ ಹಾಳೆಯಿಂದ ತಯಾರಾಗುವ ಅಡಿಕೆ ಹಾಳೆ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಕ್ಯಾನ್ಸರ್ ಬರಲಿದೆ ಎಂಬ ಕೂಗಿದೆ. ಅದನ್ನ ಅಮೇರಿಕಾ ದೇಶದೊಂದಿಗೆ ಸಮನ್ವಯ ಸಾಧಿಸಿ ಹಾಳೆ ಹಾನಿಕಾರಕವಲ್ಲ ಎಂದು ಮನವರಿಕೆ ಮಾಡಿ ಕೊಡುವಂತೆ, ಕೃಷಿ ಉಪಕರಣಗಳ ಆಮದು ಉಪಕರಣದ ಕಡಿಮೆ ಸುಂಕ ವಿಧಿಸುವಂತೆ ಆರ್ಥಿಕ ಮತ್ತು ಕೃಷಿ ಸಚಿವರ ಜೊತೆ ಚರ್ಚಿಸಲಾಗಿದೆ ಎಂದರು.
ಸೀಪ್ ಲೈನ್ ಬಗ್ಗೆ ಚರ್ಚೆ ಆಗಿದೆ. ಟೆಂಡರ್ ಕರೆಯಲು ಯೋಚಿಸಲಾಗಿದೆ. 25 ಕೋಟಿ ವೆಚ್ಚದಲ್ಲಿ ಬೈಂದೂರು ಮತ್ತು ಸಿಗಂದೂರಿನಲ್ಲಿ ಏರೋಡ್ರಮ್ ನಿರ್ಮಿಸಲಾಗುತ್ತಿದೆ. ಫ್ಲೋಟಿಂಗ್ ವಿಮಾನ ತರಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುತ್ತಿದೆ ಎಂದರು.
ಕೇಂದ್ರದ ಸಂಸತ್ ನಲ್ಲಿ ಒಂದು ದಿನವೂ ನಡೆಸಲು ಒಕ್ಕೂಟ ಅವಕಾಶಕೊಡಲಿಲ್ಲ. ಇಲ್ಲದ ವಿಚಾರವನ್ನ ನೂರು ಬಾರಿ ಹೇಳಿ ರಾಜಕಾರಣ ಮಾಡಲಾಗುತ್ತಿದೆ. ಚುನಾವಣೆ ಆಯೋಗ ಅಧಿಕೃತ ಮಾಹಿತಿ ಕೇಳಿದರೆ ಗಾಳಿಯಲ್ಲಿ ಗುಂಡು ಹೊಡೆದುಕೊಂಡು ಓಡಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮೊದಲಾದವರು ಉಪಸ್ಥಿತರಿದ್ದರು.
In an effort to stop misinformation about areca nut, aerodromes are being built in two places in my constituency

