ಸಂಸತ್ ಖೇಲ್ ಮಹೋತ್ಸವ-2025 ರ ಅಂಗವಾಗಿ ನಾಳೆ ಪೋರ್ಟಲ್ ಬಿಡುಗಡೆ- Portal to be launched tomorrow

 SUDDILIVE || SHIVAMOGGA

ಸಂಸತ್ ಖೇಲ್ ಮಹೋತ್ಸವ-2025 ರ ಅಂಗವಾಗಿ ನಾಳೆ ಪೋರ್ಟಲ್ ಬಿಡುಗಡೆ-Portal to be launched tomorrow as part of Parliament Khel Mahotsav-2025

Portal, launch

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಸಂಸತ್ ಖೇಲ್ ಮಹೋತ್ಸವ್-2025 ಹಮ್ಮಿಕೊಳ್ಳಲಾಗುತ್ತಿದ್ದು ಇದರ ಪೋರ್ಟಲ್ ನ್ನ‌ ನಾಳೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಉದ್ಘಾಟಿಸಲಾಗುವುದು ಎಂದು ಸಂಸದರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 2014 ರ ನಂತರ ದೇಶ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ದೇಶದ ಆರ್ಥಿಕವಾಗಿ ಆಘಾತವಾದರೂ ಪ್ರಧಾನಿ ಮೋದಿ ಎಚ್ಚರಿಕೆಯಿಂದ ನಡೆಸುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೂ ಗಮನ ಕೊಟ್ಟಿದ್ದಾರೆ. ಅದರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಯೋಚಿಸಲಾಗಿದೆ.   ಖೇಲೋ ಇಂಡಿಯಾ ಯೋಜನೆಯ ಅಡಿ ಅನೇಕ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತಿದೆ. ಟಾರ್ಕ್ ಅಡಿ ಅನೇಕ ಕ್ರೀಡಾಪಟುಗಳಿಗೆ ಶಕ್ತಿತುಂಬಲಾಗುತ್ತಿದೆ ಎಂದು ಅವರು ತಿಳಿಸಿದರು. 

ಒಲಂಪಿಕ್,  ಕಾಮನ್ ವೆಲ್ತ್ ಏಷಿಯನ್ ಗೇಮ್ ಗಳಲ್ಲಿ ದೇಶ ಭಾಗಿಯಾಗಿ ಪದಕ ಗೆಲ್ಲುವಂತೆ ಮಾಡಿದೆ‌ ಸಂಸತ್ ಖೇಲ್ ಮಹೋತ್ಸವ್-2025 ಹೊಸ ಯೋಜನೆ ತರಲಾಗುತ್ತಿದೆ. ಸಾಂಸ್ಕೃತಿಕ ಮತ್ತು ನಾಯಕತ್ವ ಉತ್ತೇಜಿಸುವುದು. ಫಿಟ್ ನೆಸ್ ಮುಖಾಂತರ, ಕ್ರೀಡೆಯನ್ನ‌ಉತ್ತೇಜಿಸಲು ಮನೆ ಮನೆಗೂ ಹರಡಲು ಪ್ರತಿ ಲೋಕಾಸಭಾ ಕ್ಷೇತ್ರದಲ್ಲಿ ಈ ಮಹೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದೆ. 

ಕ್ರೀಡೆಯು  ಸೆ. 21 ರಿಂದ ಡಿಸೆಂಬರ್ 25 ರ ವರೆಗೆ ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತದಲ್ಲಿ ನಡೆಯಲಿದೆ. ಕಾಮನ್ ವೆಲ್ತ್ ಆಟವನ್ನು ಈಗ ಗುಜರಾತ್ ನಲ್ಲಿ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಒಲಂಪಿಕ್ ಸಹ ನಡೆಸಲು ಬೇಡಿಕೆ ಇಡಲಿದೆ ಎಂದರು. 

ಸಾಧಕರನ್ನ ಗುರುತಿಸಿ ಕ್ರೀಡಾ ವೇತನ, ಹಣಕಾಸು ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರೆ ಯುವಕರನ್ನ‌ ಕ್ರೀಡಾಟುಗಳನ್ನ‌ಮಾಡಲು ಸಾಧ್ಯವಾ ಎಂಬ ಯೋಚನೆಗಳು ನಡೆಸುತ್ತಿದೆ.‌ ಇದನ್ನ ನಮೋ ಫಿಟ್ ಇಂಡಿಯಾ ಫಿಟ್ ಅಡಿ ನಾಳೆ ಮಹೋತ್ಸವದ ಪೋರ್ಟಲ್ ಉದ್ಘಾಟನೆ ಆಗಲಿದೆ. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು. 

ಕ್ವಿಟ್ ಇಂಡಿಯಾ ಚಳುವಳಿಗೆ ಚಾಲನೆ ಕೊಟ್ಟ ದಿನವಾಗಿದೆ. ನಾಳೆಯಿಂದ ಆನ್ ಲೈನ್ ನಲ್ಲಿ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಆ.29 ರಿಂದ ಸೆ.20 ರವರೆಗೆ  ಆನ್ ಲೈನ್ ನಲ್ಲಿ ಮಾಡಿಕೊಳ್ಳಬಹುದು‌ ಆಫ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು ತಹಶೀಲ್ದಾರ್ ಕಚೇರಿಯಲ್ಲಿರುವ ಸಂಸದರ ಕಚೇರಿ ಸಂಪರ್ಕಿಸಬಹುದಾಗಿದೆ. ಪಿಯುಸಿ ನಂತರದವರು ಭಾಗಿಯಾಗಬಹುದಾಗಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಎಂಎಕ್ ಸಿ ಧನಂಜಯ ಸರ್ಜಿ, ಡಿಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಹರಿಕೃಷ್ಣ,  ಅಣ್ಣಪ್ಪ ಮಾಲ್ತೇಶ್, ಕುಗ್ವೆ, ದರ್ಶನ್ ಮೊದಲಾದವರು ಉಪಸ್ಥಿತರಿದ್ದರು. 

Portal to be launched tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close