SUDDILIVE || SHIVAMOGGA
ಕಾಂಗ್ರೆಸ್ ನ ಬೌದ್ಧಿಕತೆ ಹರಾಜಾಗಿದೆ-ಡಿ.ಎಸ್.ಅರುಣ್-Congress's intellectualism has been auctioned off - D.S. Arun
ಭದ್ರಾವತಿ ಸಿದ್ದಲೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಕಾರ್ಮಿಕರ ಭವನ ನಿರ್ಮಿಸಿದ್ದು ಯಾರು ಎಂಬುದು ತಿಳಿಯ ಬೇಕಿತ್ತು ಎಂದು ಎಂಎಲ್ ಸಿ ಡಿ.ಎಸ್ ಅರುಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಭವನವನ್ನ ನಾವು ನಿರ್ಮಿಸಿದ್ದನ್ನೂ ಮರೆತಿದ್ದರು. ಶಿವಮೊಗ್ಗದಲ್ಲಿ ನಡೆದಿದ್ದು ಸರ್ಕಾರಿ ಕಾರ್ಯಕ್ರಮ ಆಗಿತ್ತು. ಸಾರ್ವಜನಿಕ ಸಭೆಯಲ್ಲಿ ರಾಜಕೀಯ ಭಾಷಣ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನ ಸರ್ಕಾರಿ ಕಾರ್ಯಕ್ರಮವನ್ನ ಉಲ್ಲೇಖಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಸಹ ರಾಜಕಾರಣ ಮಾಡುತ್ತೇವೆ ಎಂದರು.
ಇಎಸ್ಐ ರಿನಿವಲ್ ಆಗಿಲ್ಲ. 15 ದಿನ ತಡವಾಗಿ ರಿನಿವಲ್ ಆಗಿದ್ದಕ್ಕೆ ಜಿಲ್ಲೆಯಲ್ಲಿ ಸಾವಾಗಿದೆ. ಅದನ್ನ ಮಾತನಾಡಿ ಸರಿಪಡಿಸುತ್ತಾರೆ ಎಂದು ಭಾವಿಸಿದ್ವಿ, ಆದರೆ ಸಚಿವರು ದೇಶದ ಜಿಡಿಪಿ, ಡಿಮಾನಟೈಸೇಷನ್ ಬಗ್ಗೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮವಾಗಿರಲಿಲ್ಲ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಇವರ ಆಡಳಿತದಲ್ಲಿ 2000 ದಿಂದ ನಾಲ್ಕು ಸಾವಿರ ಚದುರ ಅಡಿ ಚೀನ ದೇಶ ಒತ್ತುವರಿ ಮಾಡಿರುವುದಾಗಿ ಎಂದು ರಾಜಸ್ಥಾನದಲ್ಲಿ ಭಾಷಣ ಮಾಡುವ ರಾಹುಲ್ ಗಾಂಧಿಗೆ ಉದಯ ಶ್ರೀನಿವಾಸ್ ಎಂಬುವರು ಮಾನನಷ್ಠ ಮೊಕದ್ದಮೆ ಹಾಕಿದ್ದಾರೆ. ವಾಕ್ ಸ್ವಾತಂತ್ರ್ಯ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ತಿಳಿಹೇಳಿದರು.
ಕಾಂಗ್ರೆಸ್ ನ ಬೌಧ್ಧಿಕತೆ ಹರಾಜಾಗಿದೆ. ರಾಜ್ಯದಲ್ಲಿ 136 ಸೀಟ್ ಬಂದಿದ್ದಕ್ಕೆ ಇವಿಎಂ ಸರಿಯಿತ್ತು ಎನ್ನುವ ಕಾಂಗ್ರೆಸ್ ಲೋಕಸಭೆಯಲ್ಲಿ ಸೀಟ್ ಕಡಿಮೆ ಬಂದಾಗ ಚುನಾವಣೆ ಆಯೋಗ ಮತ್ತು ಇವಿಎಂ ವಿರುದ್ಧ ಮಾತನಾಡುತ್ತಾರೆ. ತಮ್ಮ ನಿಲುವನ್ನ ಸರಿಪಡಿಸಿಕೊಳ್ಳಬೇಕೆಂದರು.
auctioned off - D.S. Arun
