SUDDILIVE || SHIVAMOGGA
ಒಳ ಮೀಸಲಾತಿ ಅವೈಜ್ಞಾನಿಕ ಹಿನ್ನಲೆಯಲ್ಲಿ ಸೆ.1 ರಂದು ಬಂಜಾರ ಸಂಘದ ಪ್ರತಿಭಟನೆ-Unscientific background of internal reservation
ಒಳಮೀಸಲಾತಿಯೇ ಬೇಡ ಎಂಬುದು ಬಂಜಾರ ಸಮುದಾಯದ ನಿಲುವಿತ್ತು. ಒಳಮೀಸಲಾತಿಯ ವರಗ್ಈಕರಣವನ್ನ ನಡೆಸಿರುವುದೇ ತಪ್ಪು ಎಂದು ನಮ್ಮನಿಲುವು ಎಂದು ಜಿಲ್ಲಾ ಬಂಜಾರ ಸಮಾಜ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಝರಾದ ಶಶಿಕುಮಾರ್, ಮೇಲ್ವರ್ಗಕ್ಕೆ ಸಮುದಾಯವನ್ನ ತೆಗೆದುಕೊಂಡು ಹೋಗಬೇಕು ಎಂಬುದು ಸಂವಿಧಾನದಲ್ಲಿದೆ. ಮೀಸಲಾತಿಯನ್ನ ವೈಜ್ಞಾನಿಕವಾಗಿ ಮಾಡದೆ ಒಂದಿಷ್ಟು ಸಮುದಾಯಕ್ಕೆ ಒಳ ಮೀಸಲಾತಿ ನೀಡಿ ಇತರೆ ಉಳಿದ ಸಮುದಾಯವನ್ನ ಸಂವಿಧಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಹೇಳಿದರು.
ಸಮೀಕ್ಷೆ ಸರಿ ಮಾಡಿ ಮೀಸಕಾತಿ ನೀಡಬೇಕಿತ್ತು. ನಾಗಮೋಹನ್ ದಾಸ್ ಅವರು ಇತರೆ ರಾಜಕೀಯ ವ್ಯಕ್ತಿಗಳ ಪ್ರ ಭಾವಕ್ಕೆ ಒಳಗಾದ್ರ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ನಡೆಸಲಿದ್ದು ಅದರ ಮೂಲಕ ಮೀಸಲಾತಿ ತರಬೇಕು. ಹಾಗಾಗಿ ಸಂಘ ಸೆ.1 ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ 99 ಜಾತಿಗಳನ್ನ ಒಳಗೂಡಿಸಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ 4.5% ಮೀಸಲಾತಿ ನೀಡಿತ್ತು. ಈಗ ಕಾಂಗ್ರೆಸ್ 63 ಸಮುದಾಯಕ್ಕೆ 5% ನೀಡಿದೆ. ಈ ಎರಡೂ ಅವೈಜ್ಞಾನಿಕ ನಿರ್ಣಯ ಎಂದು ದೂರಿದರು.
Unscientific background of internal reservation