ad

ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರಿಯ ಎಕ್ಸಿಬಿಷನ್‌ ಆರಂಭ-Krishnaiah Chetty Group of Jewellery exhibition begins

 SUDDILIVE || SHIVAMOGGA

ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರಿಯ ಎಕ್ಸಿಬಿಷನ್‌ ಆರಂಭ-Krishnaiah Chetty Group of Jewellery exhibition begins

Jewellary, krishnaiah chetty

ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ಕಂಪನಿಗಳಲ್ಲಿ ಒಂದಾದ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ಕಾಲಾತೀತ ಸಂಪ್ರದಾಯ ಮತ್ತು ಅತ್ಯಾಧುನಿಕತೆಯ ಸಮ್ಮಿಲನದ ಆಭರಣಗಳ ವಿಶೇಷ ಮಾರಾಟ ಪ್ರದರ್ಶನದೊಂದಿಗೆ ನಾಲ್ಕು ದಿನಗಳ ಕಾಲ ಶಿವಮೊಗ್ಗವನ್ನು ಬೆರಗುಗೊಳಿಸಲು ಸಜ್ಜಾಗಿದೆ.

ಈ ಮಾರಾಟ ಪ್ರದರ್ಶನವು ಆಗಸ್ಟ್ 29 ರಿಂದ ಸೆಪ್ಟೆಂಬರ್ 01, 2025 ರವರೆಗೆ ಶಿವಮೊಗ್ಗದ ಹೋಟೆಲ್ ರಾಯಲ್ ಆರ್ಕಿಡ್ ಸೆಂಟ್ರಲ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ತೇಡಿಕೆಲ ಸುಬ್ಬಯ್ಯ ವೈದ್ಯಕೀಯ ಕಾಲೇಜು ಮತ್ತು ಮ್ಯಾಕ್ಸ್ ಆಸ್ಪತ್ರೆ ಗ್ರೂಪ್‌ನ ವೈದ್ಯಕೀಯ ನಿರ್ದೇಶಕ ಮತ್ತು ಅಧ್ಯಕ್ಷ ಡಾ. ನಾಗೇಂದ್ರ ಉದ್ಘಾಟಿಸಿದರು. 

ಇದು ಕಲಾತ್ಮಕತೆ, ಪರಂಪರೆ ಮತ್ತು ನಾವೀನ್ಯತೆಯ ಸಮ್ಮಿಲನ ಹೊಂದಿರುವ ಆಭರಣಗಳ ಪ್ರದರ್ಶನದ ಪ್ರಾರಂಭವಾಗಿದೆ. ಈ ಪ್ರದರ್ಶನದೊಂದಿಗೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ತನ್ನ ಜನಪ್ರಿಯ ಕರಕುಶಲತೆ, ಅಪರೂಪದ ರತ್ನದ ಹರಳುಗಳು ಮತ್ತು ಪರಂಪರೆ-ಪ್ರೇರಿತ ವಿನ್ಯಾಸಗಳನ್ನು ಶಿವಮೊಗ್ಗಕ್ಕೆ ಹೊತ್ತುತಂದಿದೆ. 

155 ವರ್ಷಗಳಿಂದ, ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಅತ್ಯುತ್ತಮ ಕಲಾತ್ಮಕತೆ, ಸಾಟಿಯಿಲ್ಲದ ಗುಣಮಟ್ಟ ಮತ್ತು ರಾಜಮನೆತನಗಳು ಮತ್ತು ಅಭಿಜ್ಞರಿಗೆ ಸೇವೆ ಸಲ್ಲಿಸುವ ಮೂಲಕ ಪಾರಂಪಾರಿಕ ಆಭರಣಗಳಿಗೆ ಪರ್ಯಾಯ ಹೆಸರಾಗಿದೆ.

ಈ ಪ್ರದರ್ಶನವು ಪ್ರಕಾಶಮಾನವಾದ ಮುತ್ತುಗಳು, ಭವ್ಯವಾದ ಅಮೆಥಿಸ್ಟ್‌ಗಳು, ರಾಜಮನೆತನದ ಪಚ್ಚೆಗಳು ಮತ್ತು ಶುಭ್ರವಾದ ಮಾಣಿಕ್ಯಗಳಿಂದ ಎದ್ದುಕಾಣುವ ವೈಡೂರ್ಯ, ಹೊಳೆಯುವ ಸಿಟ್ರಿನ್ ಮತ್ತು ಅದ್ಭುತ ವಜ್ರಗಳವರೆಗೆ ಶುದ್ಧ ಚಿನ್ನ, ಅಪರೂಪದ ರತ್ನಗಳು ಮತ್ತು ನವೀನ ವಿನ್ಯಾಸಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ರತ್ನವನ್ನು ಕ್ಲಾಸಿಕ್ ಸೊಬಗಿನಿಂದ ಇಂದಿನ ಸಮಕಾಲೀನ ಅಲಂಕಾರಗಳವರೆಗೆಪ್ರತಿಯೊಂದು ಶೈಲಿಗೆ ಪೂರಕವಾಗುವಂತೆ ಎಚ್ಚರಿಕೆಯಿಂದ ರಚಿಸಲಾಗಿದೆ.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ, "ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಾಂಡ್ ಶಿವಮೊಗ್ಗಕ್ಕೆ ತನ್ನ ಕಲಾತ್ಮಕತೆಯನ್ನು ತಂದಿರುವುದನ್ನು ನೋಡುವುದೇ ಆನಂದದಾಯಕ ಅನುಭವ. ಇವು ಕೇವಲ ಸುಂದರವಾದ ಆಭರಣಗಳಲ್ಲ - ಕಥೆಗಳು, ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಜೀವ ತುಂಬಿವೆ. ಪ್ರತಿಯೊಂದು ವಿನ್ಯಾಸದಲ್ಲೂ ತೋರಿಸಿರುವ ಕರಕುಶಲತೆ ಮತ್ತು ಕಾಳಜಿಯನ್ನು ನಮ್ಮ ಊರಿನ ಗ್ರಾಹಕರುಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು. 

"ಯಾವಾಗಲೂ ಆಭರಣಗಳು ಅದ್ಭುತವಾಗಿರುವುದರ ಜೊತೆಗೆ ಅರ್ಥಪೂರ್ಣವಾಗಿರಬೇಕು ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ನಂಬಿದೆ. ಈ ಪ್ರದರ್ಶನವು ಶಿವಮೊಗ್ಗದ ಜನರೊಂದಿಗೆ ಸಂಪರ್ಕ ಸಾಧಿಸುವ, ನಮ್ಮ ಪರಂಪರೆಯನ್ನು ಹಂಚಿಕೊಳ್ಳುವ ಮತ್ತು ನಮ್ಮ ಸುಸ್ಥಿರ ಕ್ರ್ಯಾಶ್.ಕ್ಲಬ್ ಸಂಗ್ರಹದಂತಹ ಹೊಸ ವಿಚಾರಗಳನ್ನು ಅವರಿಗೆ ಪರಿಚಯಿಸುವ ಹೆಜ್ಜೆಯಾಗಿದೆ. ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಶಿವಮೊಗ್ಗದಲ್ಲಿ ಪ್ರತಿ ಬಾರಿ ಪ್ರದರ್ಶನ ಏಪರ್ಡಿಸಿದಾಗಲೂ, ಇಲ್ಲಿನ ಜನರ ಪ್ರತಿಕ್ರಿಯೆ ನಿಜವಾಗಿಯೂ ಅಗಾಧವಾಗಿದೆ ಮತ್ತು ಇದು ಮತ್ತೆ ಮತ್ತೆ ಮರಳಿ ಬರಲು ನಮಗೆ ಸ್ಫೂರ್ತಿ ನೀಡುತ್ತದೆ. ಇಂತಹ ಇನ್ನೂ ಅನೇಕ ಪ್ರದರ್ಶನಗಳನ್ನು ಮತ್ತು ಇಲ್ಲಿ ನಮ್ಮ ಗ್ರಾಹಕರೊಂದಿಗೆ ಶಾಶ್ವತ ಸಂಬಂಧಗಳನ್ನು ಬೆಳೆಸಲು ನಾವು ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ" ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಮಳಿಗೆಯ ಮುಖ್ಯಸ್ಥ ಶ್ರೀ ಗೋಪಾಲ್ ಸಿಂಗ್ ತಿಳಿಸಿದರು.

ಈ ಕಾರ್ಯಕ್ರಮದ ಆಕರ್ಷಣೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ crash.club - ಇದು ಆಧುನಿಕ ಐಷಾರಾಮಿತನವನ್ನು ಮರು ವ್ಯಾಖ್ಯಾನಿಸುವ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ವಜ್ರಗಳ ಕ್ರಾಂತಿಕಾರಿ ಸಂಗ್ರಹವಾಗಿದೆ. ಈ ರತ್ನಗಳು ಹೊಳಪು, ಸ್ಪಷ್ಟತೆ ಹೊಂದಿದ್ದು, ಪರಿಸರಸ್ನೇಹಿಯಾಗಿದೆ.

ತಮ್ಮ ಶೈಲಿಯಷ್ಟೇ ಆತ್ಮವಿಶ್ವಾಸದಿಂದ ತಮ್ಮ ಮೌಲ್ಯಗಳನ್ನು ಅಲಂಕಾರದಲ್ಲಿ ಬಿಂಬಿಸಿಕೊಳ್ಳಲು ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ crash.club ವಜ್ರಗಳು ವಿಜ್ಞಾನ, ಕಲಾತ್ಮಕತೆ ಮತ್ತು ಸುಸ್ಥಿರತೆಯ ಸಾಮರಸ್ಯವನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಹರಳಿಗೆ ಕುಶಲಕರ್ಮಿಗಳು ಹಸ್ತಚಾಲಿತವಾಗಿ ಅಂತಿಮ ರೂಪ ನೀಡಿದ್ದಾರೆ ಮತ್ತು ಐಷಾರಾಮಿತನಕ್ಕೆ ಬ್ರ್ಯಾಂಡ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

‘ಶಿವಮೊಗ್ಗದ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ- ಇದು ಕಲಾತ್ಮಕತೆ, ಪರಂಪರೆ ಮತ್ತು ಬ್ರ್ಯಾಂಡ್‌ನ ಉದ್ದೇಶವನ್ನು ಒಟ್ಟಾಗಿಸುವ ವೇದಿಕೆಯಾಗಿದೆ, ಇಲ್ಲಿ 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಗ್ರಾಹಕರು ವೀಕ್ಷಿಸುತ್ತಾರೆ’ ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಪಿಆರ್ ಮುಖ್ಯಸ್ಥ ತೇಜಸ್ ಕಲ್ರಾ ಹೇಳಿದರು.

ಈ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ

ಈತನಕ ಕಾಣದ, ವಿಶೇಷ ಸಂಗ್ರಹಗಳನ್ನು ಮೊದಲ ಸಲ ನೋಡಬಹುದು ಆಭರಣ ತಜ್ಞರೊಂದಿಗೆ ವೈಯಕ್ತಿಕ ಸಮಾಲೋಚನೆಗಳು ಶಿವಮೊಗ್ಗ ಗ್ರಾಹಕರಿಗೆ ಮಾತ್ರ ವಿಶೇಷ ಕೊಡುಗೆಗಳು ಲಭ್ಯವಿದೆ - 9% ವರೆಗೆ ರಿಯಾಯಿತಿ ಅಂದರೆ ಕೆಳಗಿನಂತೆ ಕೊಡುಗೆ

ಬೆಳ್ಳಿ ಆಭರಣಗಳ ಮೇಲೆ 2% ರಿಯಾಯಿತಿ


ಚಿನ್ನದ ಆಭರಣಗಳ ಮೇಲೆ 4% ರಿಯಾಯಿತಿ, ವಜ್ರದ ಆಭರಣಗಳ ಮೇಲೆ 6% ರಿಯಾಯಿತಿ ಮತ್ತು ₹18.69 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿಗಳ ಮೇಲೆ 9% ರಿಯಾಯಿತಿ ದೊರೆಯಲಿದೆ. ಫ್ಯಾಷನ್, ನೈತಿಕತೆ ಮತ್ತು ಪರಂಪರೆಯ ವಿಶಿಷ್ಟ ಮಿಶ್ರಣ. ಕಥೆಯನ್ನು ಹೇಳುವ ಆಭರಣ ಪ್ರದರ್ಶನದ ಕುರಿತು ಹೆಚ್ಚಿನ ಮಾಹಿತಿಗೆ: ಗೋಪಾಲ್ ಸಿಂಗ್‌: 91 97400 18421 ಅವರನ್ನ ಸಂಪರ್ಕಿಸಬಹುದಾಗಿದೆ. 


ಬಂಗಾರಕ್ಕೆ ಬಂಡವಾಳ ಹೂಡಿಕೆ ಸೇಫ್ 


ಈ ಕುರಿತು ಮಾಧ್ಯಮಗಳೊಂದಿಗೆ ಕೃಷ್ಣಯ್ಯ ಚೆಟ್ಟಿಯ ಸ್ಟೋರ್ ಮ್ಯಾನೇಜರ್ ಮಾತನಾಡಿ ಬಂಗಾರಕ್ಕೆ ಬಂಡಾಳ ಸೇಫ್ ಆದ ಹೂಡಿಕೆಯಾಗಿದೆ.  ಸಂಸ್ಥೆಗೆ ವ್ಯವಹಾರ ಚೆನ್ನಾಗಿದೆ. ಅಮೇರಿಕಾದ ಟ್ಯಾಕ್ಸ್ ನಿಂದ ಅಲ್ಲಿನ ಜನತೆಗೆ ಹೆಚ್ಚಾಗಿದೆ. ಬೇರೆ ದೇಶಗಳಲ್ಲಿ ಹಂಚಿಹೋದರೆ ನಮ್ಮ ದೇಶದ ಹೊರೆ ಕಡಿಮೆಯಾಗಲಿದೆ. ಎಲ್ಲಾ ದೇಶಗಳು ಬಂಗಾರವನ್ನ ಸಂಗ್ರಹಿಸುತ್ತಿರುವುದರಿಂದ ಬಂಗಾರದ ಬೆಲೆ ಹೆಚ್ಚಳವಾಗಿದೆ ಎಂದರು. 

ನಿಜಾಮರವರ, ಮೈಸೈರು ಫ್ಯಾಮಿಲಿಗಳು ನಮ್ಮ ಕಂಪನಿಯ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಇಂದಿನಿಂದ ನಾಲ್ಕುದಿನ ಸೋಮವಾರದ ವರೆಗೆ ಎಕ್ಸಿಬಿಷನ್ ನಡೆಯುತ್ತಿದೆ. ಪ್ರತಿವರ್ಷ ಚೆನ್ನಾಗಿದೆ. ಇಲ್ಲಿ ಎಕ್ಸಿಬಿಷನ್ ನೋಡಿಕೊಂಡು ಹೋದವರು ಬೆಂಗಳೂರಿನ ಶೋರೂಮ್ ಗೆ ಭೇಟಿ ನೀಡುತ್ತಾರೆ ಎಂದರು.   

Krishnaiah Chetty Group of Jewellery exhibition begins

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close