SUDDILIVE || SHIVAMOGGA
ಕಲಬೆರೆಕೆ ಪೆಟ್ರೋಲ್ ಹಂಚಿಕೆ-ಪೆಟ್ರೋಲ್ ಬಂಕ್ ಬಂದ್-Petrol distribution due to confusion - petrol pump closed
ಕಲಬೆರಕೆ ಪೆಟ್ರೋಲ್ ಹಂಚುತ್ತಿರುವ ಪೆಟ್ರೋಲ್ ಬಂದ್ ನ್ನ ಮಾಲೀಕರೆ ಬಂದ್ ಮಾಡಿಕೊಂಡಿರುವ ಘನೆ ವರದಿಯಾಗಿದೆ. ಸಧ್ಯಕ್ಕೆ ಪೆಟ್ರೋಲ್ ಬಂಕ್ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ. ಕಲಬೆರೆಕೆ ಪೆಟ್ರೋಲ್ ಹಂಚಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರ ಆರೋಪದ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಎನ್ ಟಿ ರಸ್ತೆಯಲ್ಲಿರುವ ಮಂಜುನಾಥ ಪೆಟ್ರೋಲ್ ಬಂಕ್ ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ನೀಡಲಾಗುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪೊಲೀಸ್ ನವರ ಸುಪರ್ಧಿಯಲ್ಲಿ ಪೆಟ್ರೋಲ್ ಬಂಕ್ ಸಧ್ಯಕ್ಕೆ ಇದೆ.
ಬೆಳಗ್ಗೆಯಿಂದ ಪೆಟ್ರೋಲ್ ನ್ಲಿ ಕಲಬೆರೆಕೆ ವಸ್ತುಗಳು ಕಂಡುಬರುತ್ತಿದ್ದು ವಾಹನಗಳ ಚಾಲನೆಯಲ್ಲಿ ತೊಂದರೆ ಉಂಟಾಗಿ ತ್ತು. ಇದರಿಂದ ಸ್ಥಳೀಯರು ಅನೇಕರು ಪೆಟ್ರೋಲ್ ಬಂಕ್ ಗೆ ಕಂಪ್ಲೇಂಟ್ ನೀಡಿದ್ದರು. ಮೂವರು ಬೈಕ್ ಸವಾರರು ಈ ಕಂಪ್ಲೇಂಟ್ ನ್ನ ದೊಡ್ಡಪೇಟೆ ಠಾಣೆಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮಾಲೀಕರೆ ಸ್ವಯಂಕೃತವಾಗಿ ಬಂದ್ ಮಾಡಿದ್ದಾರೆ.
ದೂರಿನಲ್ಪಿ ಬಹುತೇಕ ನೀರು ಮಿಶ್ರಿತ ಎಂದು ಉಲ್ಲೇಖವಾಗಿದೆ. ಆದರೆ ಈ ಕುರಿತು ತಜ್ಞರನ್ನ ಕರೆಯಿಸಿ ಪೆಟ್ರೋಲ್ ನಲ್ಲಿ ಬೆರೆಕೆಯಾಗಿರುವ ಬಗ್ಗೆ ಪತ್ತೆಹಚ್ಚಬೇಕಿದೆ. ಸಧ್ಯಕ್ಕೆ ಬಂಕ್ ಬಂದ್ ಆಗಿದೆ. ಶಿವಮೊಗ್ಗದ ಬಹುತೇಕಪೆಟ್ರೋಲ್ ಬಂಕ್ ಗಳಲ್ಲಿ ಈ ಕಲಬೆರೆಕೆಯ ಬಗ್ಗೆ ದೂರು ಬರುತ್ತಿದೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ದೂರು ನೀಡುವ ಬಗ್ಗೆ ದೂರವಾಣಿ ಕರೆಗಳೆ ಇರುವುದಿಲ್ಲ. ಡೆನ್ಸಿಟಿಗಳೆ ಇರುವುದಿಲ್ಲ. ಇ ಎಲ್ಲ ಸಮಸ್ಯೆಗಳು ಸರಿ ಹೋಗಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ. ತಪಾಸಣೆ ಅಧಿಕಾರಿಗಳ ನಂಬರ್ ಸಹ ಹಾಕದೆ ಇರುವುದು ಈ ತೊಂದರೆಗೆ ಮೂಲಕಾರಣವಾಗಿದೆ.
petrol pump closed