SUDDILIVE || SHIVAMOGGA
ಧರ್ಮಸ್ಥಳದಲ್ಲಿ ಹೆಣಗಳ ಉತ್ಖನನ ಎಡಪಂಥೀಯರ ಷಡ್ಯಂತ್ರ- ಈಶ್ವರಪ್ಪ-Excavation of bodies in Dharmasthala is a conspiracy by leftists - Eshwarappa
ಶಿವಮೊಗ್ಗದಲ್ಲಿ ಧರ್ಮಸ್ಥಳ ವಿಚಾರವಾಗಿ ಮಾಜಿ ಡಿಸಿಎಂ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೆಣ ಹೂತು ಹಾಕಲಾಗಿದೆ ಎಂದು ಧರ್ಮಸ್ಥಳಕ್ಕೆ, ವೀರೇಂದ್ರ ಹೆಗ್ಗಡೆಯವರಿಗೆ, ಇಡೀ ಭಕ್ತರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೆನೆ ಎಂದು ಅನಾಮಿಕ ವ್ಯಕ್ತಿ ಹೇಳಿದ್ದಾನೆ. ಇಡೀ ಹಿಂದೂ ಸಮಾಜಕ್ಕೆ ಅಪಮಾನವಾಗುವಂತೆ ನಡೆದುಕೊಳ್ಳಲಾಗಿದೆ. ಹೆಣ ಹೂತು ಹಾಕಲಾಗಿದೆ ಎಂದು ಧರ್ಮಸ್ಥಳಕ್ಕೆ, ವೀರೇಂದ್ರ ಹೆಗ್ಗಡೆಯವರಿಗೆ, ಇಡೀ ಭಕ್ತರಿಗೆ ಅಪಮಾನ ಮಾಡಲಾಗಿದೆ ಎಂದರು.
ದುಷ್ಟ ಶಕ್ತಿ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಯಾರ ಮಾತು ಕೇಳಿ ಎಸ್.ಐ.ಟಿ. ರಚನೆ ಮಾಡಿದೆ ಎಂದು ಗೊತ್ತಿಲ್ಲ. ಆದರೆ ಎಸ್.ಐ.ಟಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಎಸ್.ಐ.ಟಿ. ತನಿಖೆಯಿಂದ ಇಡೀ ಸಮಾಜಕ್ಕೆ ನ್ಯಾಯ ಸಿಗಬೇಕು, ವಿರೇಂದ್ರ ಹೆಗಡೆ ಕುಟುಂಬಕ್ಕೆ, ಹಿಂದೂ ಸಮಾಜಕ್ಕೆ ನ್ಯಾಯ ಸಿಗಬೇಕು ಎಂದರು.
ಅನಾಮಿಕ ವ್ಯಕ್ತಿಗೆ ತಕ್ಷಣ ಅರೆಸ್ಟ್ ಮಾಡಬೇಕು.ಈ ತನಿಖೆ ಮೂಲಕ ಭಕ್ತರಿಗೆ ನ್ಯಾಯ ಸಿಗಬೇಕು. ಅನಾಮಿಕ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಂಡು ತನಿಖೆ ನಡೆಸಿದರೆ ಎಲ್ಲವೂ ಹೊರಬರಲಿದೆ. ಅನಾಮಿಕನನ್ನು ಅರೆಸ್ಟ್ ಮಾಡಿ ತನಿಖೆ ನಡೆಸಿದರೆ ಎಲ್ಲವೂ ಹೊರಬರಲಿದೆ ಎಂದರು.
ಆದಷ್ಟು ಸತ್ಯ ಆತನಿಂದಲೇ ಹೊರಬರಲಿದೆ. ಎಡಪಂಥಿಯರು ಮಾಡಿರುವ ಷಡ್ಯಂತ್ರ ಇದಾಗಿದೆ. ಅನಾಮಿಕನ ಹಿಂದೆ ಯಾರು ಯಾರಿದ್ದಾರೆ ಎಂದು ತನಿಖೆ ನಡೆಸಬೇಕು. ವಿದೇಶಿ ಹಣ ಇದರಲ್ಲಿ ಹೂಡಿಕೆಯಾಗಿದಿಯಾ ಎಂಬ ಅನುಮಾನ ಕಾಡುತ್ತಿದೆ. ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಿದಾಗ ಎಲ್ಲ ಸತ್ಯವೂ ಹೊರಬರಲಿದೆ ಎಂದರು.
Excavation of bodies in Dharmasthala is a conspiracy