SUDDILIVE || SHIVAMOGGA
ಎಂ.ಶ್ರೀಕಾಂತ್ ಗೆ ನೂತನ ಜವಬ್ದಾರಿ-New responsibility for M. Srikanth
ಜೆಡಿಎಸ್ ನಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ಎಂ.ಶ್ರೀಕಾಂತ್ ಕಾಂಗ್ರೆಸ್ ಪಕ್ಷಕ್ಕೆ ಬಂದು ಬಹುತೇಕ ಕಳೆದೇ ಹೋಗಿದ್ದರು. ಕಳೆದುಹೋಗಿದ್ದ ನಾಯಕನಿಗೆ ಈಗ ಹೊಸ ಜವಬ್ದಾರಿ ನೀಡಲಾಗಿದೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರನ್ನು ನೇಮಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಲಾಗಿದೆ.
ಇಂದು ಎಂ.ಶ್ರೀಕಾಂತ್ ಅವರಿಗೆ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಸೇರಿ ಹಲವರು ಇದ್ದರು. ಈ ಹಿಂದೆ ಈ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದ ಎಲ್.ಜಗದೀಶ್ ಅವರ ನೇಮಕಾತಿಯನ್ನು ಹಿಂಪಡೆಯಲಾಗಿದೆ.
responsibility for M. Srikanth