ಹೊಳೆಹೊನ್ನೂರಿನಲ್ಲಿ 2 ಕ್ವಿಂಟಾಲ್ 91 ಕೆಜಿ ಪಡಿತರ ಅಕ್ಕಿ ಸೀಜ್-Rice seized in Holehonnuru

 SUDDILIVE || BHADRAVATHI

ಹೊಳೆಹೊನ್ನೂರಿನಲ್ಲಿ 2 ಕ್ವಿಂಟಾಲ್ 91 ಕೆಜಿ ಪಡಿತರ ಅಕ್ಕಿ ಸೀಜ್-2 quintals of 91 kg of ration rice seized in Holehonnur

Rice, seized


ಭದ್ರಾವತಿ ತಾಲೂಕು ಮಲ್ಲಾಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಗೆ ಹೋಗಬೇಕಿದ್ದ ಅಕ್ಕಿಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲು ಚೀಲದಲ್ಲಿ ಕಟ್ಟಿಡಲಾಗಿದ್ದು ಒಟ್ಟು 2 ಕ್ವಿಂಟಾಲ್ 91 ಕೆಜಿ ಅಕ್ಕಿಯನ್ನ ಆಹಾರ ಇಲಾಖೆ ಸೀಜ್ ಮಾಡಿದೆ. 

ಮಾಲತೇಶ್ ಮತ್ತು ವೀರೇಶ್ ಎಂಬುವರು ಕಾಳಸಂತೆಯಲ್ಲಿ ಮಾರಾಟ ಮಾಡಲು ಚೀಲದಲ್ಲಿ ಕಟ್ಟಿ ಇಟ್ಟಿದ್ದರು. ಈ ಅಕ್ಕಿಗಳು ಮನೆಯಲ್ಲಿ ಮತ್ತು ವೀರಭದ್ರೇಶ್ವರ ಮಳಿಗೆಯಲ್ಲಿ ಸಂಗ್ರಹಿಸಿ ಇಟ್ಟಿದ್ದು ಆಹಾರ ಇಲಾಖೆ ಉಪ ನಿರ್ದೇಶಕ ಅವಿನ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಈ ದಾಳಿಯಲ್ಲಿ ಹೊಳೆಹೊನ್ನೂರು ಪಿಐ ಶಿವಪ್ರಸಾದ್ ಎಂ ಸಿಬ್ಬಂದಿಗಳಾದ ಆನಂದ್, ಮಾಬುಸಾಬ್ ಬಿಲ್ಲಳ್ಳಿ, ಆಹಾರ ಇಲಾಖೆ ನಿರೀಕ್ಷಕ ಬಸವರಾಜ್ ಮೊದಲಾದವರು ಭಾಗಿಯಾಗಿದ್ದರು. 

rice seized in Holehonnur

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close