SUDDILIVE || SHIVAMOGGA
ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸಿದ ಡಾ.ಮರುಳಸಿದ್ದ ಶ್ರೀಗಳು-Dr. Marulasidda sri said sorry if they were hurted.
ಇತ್ತೀಚೆಗೆ ಚಿಕ್ಕಮಗಳೂರಿನ ಖಾಸಗಿ ವಾಹಿನಿಯಲ್ಲಿ ನಡೆದ ನಮ್ಮ ಸಂದರ್ಶನದಲ್ಲಿ, ಗುರು, ಲಿಂಗ, ಜಂಗಮ ತತ್ವಗಳ ಮೌಲ್ಯ ಮತ್ತು ಅವು ಹೊಂದಿರುವ ಸ್ಥಿತ್ಯಂತರಗಳ ಬಗೆಗೆ ತಿಳಿಸುವಾಗ ಆಡಿರುವ ಮಾತುಗಳಿಂದ ನಮ್ಮ ಪರಂಪರೆಯ ಒಳಪಂಗಡವಾದ ಜಂಗಮ ಸಮಾಜದ ಕೆಲವರಿಗೆ ಮನಸ್ಸಿಗೆ ನೋವಾಗಿದ್ದು, ಆ ಸಂಗತಿಯು ತಮ್ಮ ಸನ್ನಿಧಾನದ ಮೂಲಕ ನಮಗೆ ತಿಳಿದು ಬಂದಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಜೊತೆಗೆ ‘ಜಂಗಮ’ ಪರಿಕಲ್ಪನೆಯು ತತ್ವ ಮತ್ತು ನಡೆ ನುಡಿಗಳ ಐಕ್ಯತೆಯಿಂದ ಪಕ್ವವಾದ ಉದಾತ್ತ ವ್ಯಕ್ತಿತ್ವ ಎಂಬ ಅರಿವಿನಲ್ಲಿ ನಾವು ಮಾತಾಡಿದ್ದು ಎಂದು ಸ್ಪಷ್ಟಪಡಿಸುತ್ತೇವೆ. ಈ ಅರಿವು ಒಂದು ಒಳಪಂಗಡದ ಬಗೆಗಿನ ನಮ್ಮ ಅಸಮಧಾನವೆಂದಾಗಲೀ, ದ್ವೇಷವೆಂದಾಗಲೀ, ತಿರಸ್ಕಾರವೆಂದಾಗಲೀ ಅರ್ಥೈಸಿಕೊಳ್ಳಬೇಕಾಗಿಲ್ಲ.
ನಮ್ಮ ಪರಂಪರೆಯ ಒಳಪಂಗಡವಾದ ಜಂಗಮ ಸಮಾಜದ ಹಲವಾರು ಮಹಾನುಭಾವರು ನಮ್ಮ ಶರಣ ಪರಂಪರೆಯ ಉನ್ನತಿಗೆ ನೀಡಿದ ಕೊಡುಗೆಗಳ ಮಹತ್ವದ ಅರಿವು ನಮಗಿದೆ. ಜೊತೆಗೆ ಆ ಸಮುದಾಯದ ಹಲವರೊಂದಿಗೆ ನಾವು ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಅವರು ನಮ್ಮ ಸಮಾಜೋ ಧಾರ್ಮಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ ಆ ಸಮುದಾಯವನ್ನು ನೋಯಿಸುವ ಯಾವುದೇ ಉದ್ಧೇಶ ನಮಗೆ ಇಲ್ಲವೆಂದು ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
Dr. Marulasidda sri said sorry if they were hurted.