SUDDILIVE || BHADRAVATHI
ಅಡ್ಡದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಯುವಕರಿಗೆ ಬುದ್ದಿವಾದಹೇಳಿದ ಯುವಕನ ಮೇಲೆ ಹಲ್ಲೆ-A young man was attacked for giving advice to young men riding bikes in the street
ಭದ್ರಾವತಿಯ ಜಯನಗರ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ಆಗಿದೆ. ಹಲ್ಲೆಗೊಳಗಾದ ಯುವಕನನ್ನ ಚಂದನ್ ಎಂದು ಗುರುತಿಸಲಾಗಿದೆ.
ಭದ್ರಾವತಿಯಲ್ಲಿ ಇಂದು ಈದ್ ಮೆರವಣಿಗೆ ನಡೆದಿತ್ತು. ಈದ್ ಮೆರವಣಿಗೆಯಲ್ಲಿ ಭಾಗಿಯಾಗಲು ತಿಪ್ಲಾಪುರದ ಅನ್ಯಕೋಮಿನ ಯುವಕರು ನಾಲ್ಕೈದು ಬೈಕ್ ನಲ್ಲಿ ಜಯನಗರ ಗ್ರಾಮಕ್ಕೆ ಎಂಟ್ರಿ ಹೊಡೆದಿದ್ದಾರೆ.
ಜಯನಗರ ಗ್ರಾಮದಲ್ಲಿ ಯಾವುದೇ ಅನ್ಯಕೋಮಿನ ಮನೆಗಳಿಲ್ಲದಿದ್ದರೂ ಈ ಯುವಕರು ಬೈಕ್ ನ್ನ ಅಡ್ಡದಿಡ್ಡಿ ಚಲಾಯಿಸಿದ್ದಕ್ಕೆ ಚಂದನ್ ಎಂಬ ಯುವಕ ಬುದ್ದಿವಾದ ಹೇಳಿದ್ದಾನೆ. ಇಷ್ಟಕ್ಕೆ ಈ ಯುವಕನನ್ನ ಅನ್ಯಕೋಮಿನ ಯುವಕರು ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
A young man was attacked for giving advice to young men riding bikes in the street

