ಎನ್ ಟಿ ರಸ್ತೆಯಲ್ಲಿ ಸ್ಥಾಪನೆಗೊಂಡ ವರಾಹ ರೂಪದ ಪ್ರತಿಮೆ- The statue of Varaha Avatar installed on NT Road

 SUDDILIVE || SHIVAMOGGA

ಎನ್ ಟಿ ರಸ್ತೆಯಲ್ಲಿ ಸ್ಥಾಪನೆಗೊಂಡ ವರಾಹ ರೂಪದ ಪ್ರತಿಮೆ-The statue of Varaha Avatar installed on NT Road?

ವರಾಹಾವತಾರ ಹಂದಿಯ ರೂಪದಲ್ಲಿ ಹಿಂದೂ ದೇವತೆಯಾದ ವಿಷ್ಣುವಿನ ಅವತಾರವಾಗಿದೆ, ಮತ್ತು ಇದು ಕೂರ್ಮಾವತಾರದ ನಂತರ ಹಾಗು ನರಸಿಂಹಾವತಾರದ ಮೊದಲು ವಿಷ್ಣು ಭಗವಂತನ ಅವತಾರದಲ್ಲಿ ಮೂರನೇ ಅವತಾರವಾಗಿದೆ. 

ವರಾಹವನ್ನು ಒಂದು ಹಂದಿ ಮತ್ತು ಮಾನವರ ರೂಪದಲ್ಲಿ ವರ್ಣಿಸಲಾಗಿದೆ ಅಂದರೆ ಹಂದಿಯ ತಲೆ ಮತ್ತು ಮಾನವ ದೇಹ. ವರಹ ಪದವು ಋಗ್ವೇದದಲ್ಲಿ ಕಂಡುಬರುತ್ತದೆ. ಹಿರಣ್ಯಾಕ್ಷನು ಸಾಗರದಲ್ಲಿ ಭೂಮಿ ತಾಯಿ ಅವಿತುಕುಳಿತಿದ್ದನ್ನ ಕಂಡು ಹಿಡಿಯಲು ಬಂದಾಗ ಭಗವಂತನು ವರಾಹ ಅವತಾರ ತಾಳಿ ರಕ್ಷಿಸತ್ತಾನೆ ಎಂಬುದು ಪುರಾಣದಲ್ಲಿ ಉಲ್ಲೇಖವಿದೆ.  ಯಾಕೆ ಈ ಪೀಠಿಕೆ ಎಂದರೆ ಎನ್ ಟಿ ರಸ್ತೆಯಲ್ಲಿಯೇ ವರಾಹ ರೂಪದ ಪ್ರತಿಮೆಯನ್ನ ಪ್ರತಿಷ್ಠಾಪಿಸಲಾಗಿದೆ.

ಎನ್ ಟಿ ರಸ್ತೆಯ 1 ನೇ ತಿರುವಿನ ನ್ಯೂಮಂಡ್ಲಿ ಯುವಕರ ಗಣಪತಿ ಪ್ರತಿಷ್ಠಾಪನ ಸಂಘ ಈ ಪ್ರತಿಮೆಯನ್ನ ಪ್ರತಿಷ್ಠಾಪಿಸಿದೆ. ಈ ಪ್ರತಿಷ್ಠಾಪನೆಗೆ ಸಾಮಾಜಿಕ ಜಾಲತಾಣದಲ್ಲಿ ಅಡ್ಡಿಯ ಬಗ್ಗೆ ಪ್ರಸ್ತಾಪಗೊಂಡಿತ್ತು. ಆದರೆ ನಿನ್ನೆಯಿಂದಲೇ ವರಾಹ ರೂಪದ ಪ್ರತಿಮೆ ಪ್ರತಿಷ್ಠಪನೆಗೊಂಡಿದೆ. 

ಈ ಮೂರ್ತಿಯಲ್ಲಿ ಸಣ್ಣದೊಂದು ಬದಲಾವಣೆಗೊಂಡಿದೆ. ಹಂದಿಯ ರೂಪದ ವರಾಹನಿಗೆ ಸಿಂಹ ಎರಡು ಮುಖಗಳನ್ನ ಜೋಡಿಸಲಾಗಿದೆ. ವರಾಹ ರೂಪದ ನಂತರ ಬರುವ ರೂಪವೇ ನರಸಿಂಹನ ಅವತಾರವಾದುದರಿಂದ ವರಾಹನಿಗೆ ನರಸಿಂಹನ ಮುಖ ಅಳವಡಿಸಿರಬಹುದು ಎಂದು ಊಹಿಸಲಾಗಿದೆ. ಅದರಂತೆ ಪ್ರತಿವರ್ಷ ನ್ಯೂ ಮಂಡ್ಲಿಯ ಮೂರನೇ ತಿರುವಿನ ಗಣಪತಿ ಯುವಕರ ಸಂಘದ ಪ್ರತಿಮೆಯೂ ಮುಂದುವರೆದಿದೆ. 

ಕುರುಕ್ಷೇತ್ರದ ರಣರಂಗದಲ್ಲಿ ಭೀಷ್ಮನಿಗೆ ಶ್ರೀಕೃಷ್ಣ ಸುದರ್ಶನ ಚಕ್ರ ಹಿಡಿದು ಮುನ್ನುಗ್ಗುತ್ತಿರುವುದು ಮತ್ತು ಆತನ‌ ಕಾಲನ್ನ ಅರ್ಜುನ ಹಿಡಿದಿರುವ ಪ್ರತಿಮೆಗಳನ್ನ ಪ್ರತಿಷ್ಠಾಪಿಸಲಾಗಿದೆ. ಈ ಎಲ್ಲಾ ಪ್ರತಿಮೆಗಳನ್ನ ಜೀವನ್ ಅವರೇ ರೂಪಿಸಿರುವುದು ವಿಶೇಷವಾಗಿದೆ. 

The statue of Varaha Avatar installed on NT Road?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close