SUDDILIVE || SHIVAMOGGA
ಆನೆಗೆ ಪೂಜಿಸಿ ಅಂಬಾರಿ ಹೋರಲು ಆಹ್ವಾನ-An invitation to worship the elephant and carry the load
ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾ-2025ರ ಅಂಗವಾಗಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಗೆ ಆನೆಗಳನ್ನ ಆಹ್ವಾನಿಸಲಾಗಿದೆ.
ಇಂದು ಅಧಿಕೃತವಾಗಿ ಸಕ್ರೇಬೈಲು ಆನೆ ಬಿಡಾರಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ, ಆಯುಕ್ತ ಮಾಯಣ್ಣಗೌಡ ಮತ್ತು ಪಾಲಿಕೆಯ ಮಾಜಿ ಸದಸ್ಯರು ತೆರಳಿ ಅಂಬಾರಿ ಹೊರಲು ಬರುವ ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯ ಇಲಾಖೆಗೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಅಧಿಕೃತ ಆಹ್ವಾನ ನೀಡಿದರು. ಅಂಬಾರಿ ಹೊರಲಿರುವ ಸಾಗರ್, ಬಾಲಣ್ಣ, ಬಹದ್ದೂರ್ ಆನೆಗಳಿಗೆ ಇಂದು ವಿಶೇಷ ಸಲ್ಲಿಸಲಾಯ್ತು.
ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ ದಸರಾದಲ್ಲಿ ಅಂಬಾರಿ ಹೋರಲು ಇಂದು ಆನೆಗಳನ್ನ ಆಹ್ವಾನಿಸಲು ಸಕ್ರೆಬೈಲಿಗೆ ಬಂದಿದ್ದೇವೆ. ಆನೆಗಳಿಗೆ ಪೂಜೆ ಮಾಡಿ ಆಹ್ವಾನಿಸಲಾಯಿತು. ಅ.2 ರಂದು ಆನೆಗಳು ಅಂಬಾರಿ ಹೋರಲಿವೆ. ಸಾಗರ್ ಆನೆ ಈ ಬಾರಿ ಅಂಬಾರಿ ಹೋರಲಿದೆ ಎಂದರು.
An invitation to worship the elephant and carry the load
