ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗಳು- global scientists

SUDDILIVE || SHIVAMOGGA

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗಳು-Davangere University professors in the list of global scientists

Global, scientist


ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯ ಪ್ರಕಟಿಸಿದ 2025ನೇ ಸಾಲಿನ ವಿಶ್ವದ ಶೇ.2 ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಸಿ. ಪ್ರಸನ್ನಕುಮಾರ್ ಅವರು ಸೇರಿದಂತೆ  ಬಾಪೂಜಿ ಇನ್ಸಿಟ್ಯೂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪುನೀತ್ ಗೌಡ‌ ಆರ್.‌ ಜೆ., ಅಮೃತಾ ವಿಶ್ವವಿದ್ಯಾಪೀಠಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಡಾ. ನವೀನ್ ಕುಮಾರ್ ಆರ್., ಜಿಎಂಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಧುಕೇಶ್ ಜೆ. ಕೆ.  ಹಾಗೂ ಮಲೇಶಿಯಾದ ಸನ್‌-ವೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವರುಣ್ ಕುಮಾರ್. ಆರ್. ಎಸ್. ಇವರುಗಳು ಸ್ಥಾನ ಪಡೆದಿದ್ದಾರೆ. ಪ್ರಸ್ತುತ 2025 ನೇ ಸಾಲಿನ ಪಟ್ಟಿಯಲ್ಲಿ ಇವರುಗಳು ಕ್ರಮವಾಗಿ 11379, 44028, 54518, 121882, 124671 ಶ್ರೇಯಾಂಕಗಳನ್ನು ಪಡೆದಿದ್ದಾರೆ.

ಡಾ. ಆರ್ ಎಸ್ ವರುಣ್ ಕುಮಾರ್ ಶಿವಮೊಗ್ಗದ ಪತ್ರಕರ್ತ ಎನ್. ರವಿಕುಮಾರ್ ( ಟೆಲೆಕ್ಸ್) ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರರಾಗಿದ್ದು, ಮಲೇಷಿಯಾದ ಸನ್ ವೆ ವಿಶ್ವವಿದ್ಯಾನಿಲಯದಲ್ಲಿ  ಪ್ರಾಧ್ಯಾಪಕರಾಗಿದ್ದಾರೆ.

ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ವರದಿ, ಉಲ್ಲೇಖಗಳು ಹಾಗೂ ಲೇಖನಗಳನ್ನೊಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ನಾನಾ ಮಾನದಂಡಗಳನ್ನು ಪರಿಗಣಿಸಿ ಜಾಗತಿಕವಾಗಿ ಸಿದ್ದಪಡಿಸಿರುವ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಈ ವರ್ಷವೂ ಸೇರಿದಂತೆ ಪ್ರೊ. ಬಿ. ಸಿ. ಪ್ರಸನ್ನಕುಮಾರ್ (2021-25) ಇವರು ಸತತ 05-ವರ್ಷಗಳಿಂದ, ಡಾ. ಪುನೀತ್ ಗೌಡ (2022-25) ಮತ್ತು ಡಾ. ನವೀನ್ ಕುಮಾರ್ ಆರ್ (2022-25) ಇವರುಗಳು ಸತತವಾಗಿ 04-ವರ್ಷಗಳಿಂದ ಹಾಗೂ ಡಾ. ಮಧುಕೇಶ್ ಜೆ. ಕೆ (2023-25) ಮತ್ತು ಡಾ. ವರುಣ್ ಕುಮಾರ್ ಆರ್. ಎಸ್ (2023-25) ಇವರುಗಳು ಸತತ 03-ವರ್ಷಗಳಿಂದ ಸ್ಥಾನ ಪಡೆಯುತ್ತಾ ಬಂದಿದ್ದಾರೆ.

ಪ್ರೊ. ಬಿ. ಸಿ. ಪ್ರಸನ್ನಕುಮಾರ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮಗಿಸಿರುವ ಉಳಿದ ಈ ನಾಲ್ಕೂ ಸಹಾಯಕ ಪ್ರಾಧ್ಯಾಪಕರೂ ಸಹ ತಮ್ಮ ಮಾರ್ಗದರ್ಶಕರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ.

ಪ್ರೊ. ಬಿ. ಸಿ. ಪ್ರಸನ್ನಕುಮಾರ್ರವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಡಿ. ಕುಂಬಾರ, ಡಾ. ಪುನೀತ್ ಗೌಡ ಆರ್‌. ಜೆ.ರವರಿಗೆ ದಾವಣಗೆರೆಯ ಬಿಐಇಟಿ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ ಹಾಗೂ ಪ್ರಾಂಶುಪಾಲರಾದ ಡಾ. ಹೆಚ್‌. ಬಿ. ಅರವಿಂದ, ಡಾ. ನವೀನ್ ಕುಮಾರ್ ಆರ್.ರವರಿಗೆ ಅಮೃತ ವಿಶ್ವವಿದ್ಯಾಪೀಠಂನ ಆಡಳಿತ ವರ್ಗ, ಕುಲಪತಿಗಳಾದ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು, ಡಾ. ಮಧುಕೇಶ್ ಜೆ. ಕೆ.ರವರಿಗೆ ದಾವಣಗೆರೆ ಜಿಎಂಐಟಿ ಕಾಲೇಜಿನ ಆಡಳಿತ ವರ್ಗ ಹಾಗೂ ಪ್ರಾಂಶುಪಾಲರು ಹಾಗೂ ಡಾ. ವರುಣ್ ಕುಮಾರ್ ಆರ್. ಎಸ್‌.ರವರಿಗೆ ಸನ್‌-ವೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

global scientists

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close