ಮೆರವಣಿಗೆಯ ಮೇಲೆ ಉಗಿದ ಪ್ರಕರಣ, ವಿಷಾದ ವ್ಯಕ್ತಪಡಿಸಿದ ಅಂಜುಮನ್ ಕಮಿಟಿ ಅಧ್ಯಕ್ಷರು-Anjuman Committee President expresses regret over incident

 SUDDILIVE || SAGARA

ಮೆರವಣಿಗೆಯ ಮೇಲೆ ಉಗಿದ ಪ್ರಕರಣ, ವಿಷಾದ ವ್ಯಕ್ತಪಡಿಸಿದ ಅಂಜುಮನ್ ಕಮಿಟಿ ಅಧ್ಯಕ್ಷರು-Anjuman Committee President expresses regret over incident that erupted during procession

Anjuman, committee

ಸಾಗರದಲ್ಲಿ ನಡೆದ ಘಟನೆಯ ಬಗ್ಗೆ ಮುಸ್ಲೀಂ ಸಮುದಾಯದ ಮುಖಂಡರು ವಿಷಾಧ ವ್ಯಕ್ತಪಡಿಸಿದ್ದಾರೆ. ಬಾಲಕರ ತಪ್ಪಿಗೆ ಮುಖಂಡರು ವಿಷಾಧ ವ್ಯಕ್ತಪಡಿಸಿದ್ದಾರೆ. 

ಜನ್ನತ್ ಗಲ್ಲಿಯಲ್ಲಿ ಇಂದು ಜೈ ಭುವನೇಶ್ವರಿ ಯುವಕರ ಸಂಘದ ಗಣಪತಿ ರಾಜಬೀದಿ ಉತ್ಸವ ವೇಳೆಯಲ್ಲಿ ಆರಂಂದಲ್ಲಿಯೇ  ಬಾಲಕನೋರ್ವನಿಂದ ಅಹಿತಕರ ಘಟನೆ ನಡೆದಿರುವ ವಿಡಿಯೋವೊಂದು ವೈರಲ್ ಆಗಿ ಬಾಲಕನ ತಾಯಿಯಿಂದ ಕ್ಷಮೆಯಾಚನೆಯೂ ನಡೆದಿತ್ತು. 

ಇದರ ಬೆನ್ನಹಿಂದೆಯೇ ಅಂಜುಮನ್ ಎ ಸಾಗರ್ ಕಮೀಟಿ ಅಧ್ಯಕ್ಷ ಸೈಯದ್ ಇಕ್ಬಾಲ್ ಘಟನೆಯ ಬಗ್ಗೆ ವಿಷಾದನೀಯ ವ್ಯಕ್ತಪಡಿಸಿದ್ದಾರೆ. ತಿಳಿದು ತಿಳಿಯದಂತೆ ಅಪ್ರಪ್ತ ಬಾಲಕ ರಿಂದ ತಪ್ಪು ನಡೆದಿದೆ. ಎಲ್ಲಾರು ಸೌಹಾರ್ದತೆಯಿಂದ ಬಾಳೋಣ ಎಂದು ಕರೆ ನೀಡಿದ್ದಾರೆ. 

ಹಿಂದಿನಿಂದಲೂ ಸಾಗರದಲ್ಲಿ ಶಾಂತಿಯುತವಾಗಿ ಗಣಪತಿ ಮೆರವಣಿಗೆ ನಡೆದಿದೆ. ಮುಂದೆಯೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ನಾವೆಲ್ಲ ಕಟಿಬದ್ದರಾಗಿದ್ದೇವೆ ಎಂದು ಸೈಯದ್ ಇಕ್ಬಾಲ್ ತಿಳಿಸಿದ್ದಾರೆ.

ಮುಸ್ಲೀಂ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ  ಅಹಿತಕರ ಘಟನೆ ನಡೆದಿರುವುದು ನೋವುತಂದಿದೆ. ಇಂದು ಗಣಪತಿ ಮೆರವಣಿಗೆಯಲ್ಲಿ ಮುಸ್ಲೀಂ ಸಮುದಾಯ ಸೌಹಾರ್ಧತೆಯ ಹಿನ್ನಲೆಯಲ್ಲಿ ಗಣಪತಿ ಮೆರವಣಿಗೆಯಲ್ಲಿ ಭಾಗಿಯಾದ  2000 ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸೌಹಾರ್ಧತೆಯಲ್ಲಿ ಬದುಕೋಣ ಎಂದು ಕರೆ ನೀಡಿದ್ದಾರೆ

Anjuman Committee President expresses regret over incident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close