ಶಿವಮೊಗ್ಗದಲ್ಲಿ ತಿಳಿ ತಾಮ್ರ ಮಿಶ್ರಿತ ಕೆಂಪು ಬಣ್ಣದ ಚಂದ್ರ ಗೋಚರ-A light coppery red moon in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ತಿಳಿ ತಾಮ್ರ ಮಿಶ್ರಿತ ಕೆಂಪು ಬಣ್ಣದ ಚಂದ್ರ ಗೋಚರ-A light coppery red moon is visible in Shivamogga


ಶಿವಮೊಗ್ಗದಲ್ಲಿ ತಿಳಿ ತಾಮ್ರ ಮಿಶ್ರಿತ ಕೆಂಪು ಬಣ್ಣದ ಚಂದ್ರಗ್ರಹಣ ಗೋಚರಿಸುತ್ತಿದೆ. ಮೊದಲಿಗೆ ಬೆಳ್ಳಗೆ ಇದ್ದ ಚಂದ್ರನ ಮೇಲ್ಮೈ ನಂತರ ತಿಳಿ ತಾಮ್ರ ಮಿಶ್ರಿತ ಕೆಂಪು ಬಣ್ಣಗೆ ತಿರುಗಿದೆ. ಇಂದು ಯಾವುದೇ ಮೋಡಗಳು ಅಡ್ಡವಿಲ್ಲದೆ ಇರುವ ಕಾರಣ ಚಂದ್ರನ ಪೂರ್ಣವಾಗಿ ನೋಡಲು ಅವಕಾಶ ಸಿಕ್ಕಿದೆ. 

ಭಾರತ, ಚೀನಾ, ರಷ್ಯಾ, ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಅರಬ್ ದೇಶಗಳಲ್ಲಿ ಸ್ಪಷ್ಟವಾಗಿ ಕಾಣಲಿದೆ. ಉತ್ತರ ಅಮೆರಿಕಾದಲ್ಲಿ ಈ ಗ್ರಹಣ ಗೋಚರಿಸಲ್ಲ. ಅಲಾಸ್ಕಾದ ಪಶ್ಚಿಮ ಭಾಗದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ. ಬ್ರಿಟನ್ ಮತ್ತು ಪಶ್ಚಿಮ ಯುರೋಪಿನಲ್ಲಿ ಚಂದ್ರ ಉದಯಿಸಿದ ತಕ್ಷಣ ಗ್ರಹಣದ ನೆರಳು ಕಾಣಿಸಲಿದೆ. 

ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಚಲಿಸುವಾಗ ಚದುರಿಹೋಗುತ್ತದೆ. ಇದರರ್ಥ ಕಡಿಮೆ ತರಂಗಾಂತರಗಳು (ನೀಲಿ) ದೀರ್ಘ ತರಂಗಾಂತರಗಳಿಗಿಂತ (ಕೆಂಪು) ಹೆಚ್ಚು ಚದುರಿಹೋಗುತ್ತವೆ. ಈ ಸಮಯದಲ್ಲಿ, ಕೆಂಪು ಬೆಳಕು ಚಂದ್ರನ ಕಡೆಗೆ ಬಾಗುತ್ತದೆ. ಅದಕ್ಕಾಗಿಯೇ ಈ ಚಂದ್ರಗ್ರಹಣವನ್ನು ರಕ್ತಚಂದ್ರ ಎಂದು ಕರೆಯಲಾಗುತ್ತದೆ.

ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಬೆಳಕು ಚಂದ್ರನ ಡಿಸ್ಕ್ ಅನ್ನು ಬೆಳಗಿಸುತ್ತದೆ. ಭೂಮಿಯು ಮಧ್ಯದಲ್ಲಿರೋದ್ರಿಂದ ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ.

A light coppery red moon in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close