ಕಾನೂನು ಸೇವಾ ಪ್ರಾಧಿಕಾರದಲ್ಲಿ ಅರೆಕಾಲಿಕ ಸ್ವಯಂ ಸೇವಕ ಹುದ್ದೆಗೆ ಅರ್ಜಿ ಆಹ್ವಾನ- Applications are invited for the post of part-time volunteer at the Legal Services Authority

SUDDILIVE || SHIVAMOGGA

ಕಾನೂನು ಸೇವಾ ಪ್ರಾಧಿಕಾರದಲ್ಲಿ ಅರೆಕಾಲಿಕ ಸ್ವಯಂ ಸೇವಕ ಹುದ್ದೆಗೆ ಅರ್ಜಿ ಆಹ್ವಾನ-Applications are invited for the post of part-time volunteer at the Legal Services Authority.

Application, post

ರಾಜ್ಯ ನ್ಯಾಯಾಲಯದಲ್ಲಿ ಅರೆಕಾಲಿಕ ಸ್ವಯಂ ಸೇವಕರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ SSLC  ವಿದ್ಯಾರ್ಹತೆ ಹೊಂದಿದವರು ಈ ಕೆಲಸಕ್ಕೆ ಅರ್ಹರಾಗಿದ್ದಾರೆ.

ಪ್ರತಿದಿನ 750 ರೂ. ಗೌರವಧನ ನಿಗದಿಯಾಗಿದೆ. ಸೆಪ್ಟಂಬರ್ 30 ರೊಳಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಿವಮೊಗ್ಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋರ್ಟ್ ಸಂಕೀರ್ಣ, ಹೆಚ್ಚುವರಿ ಕಟ್ಟಡ, 3 ನೇ ಮಹಡಿ, ಶಿವಮೊಗ್ಗ - 577 201 ಇಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನ ಇದೇ ಸೇವಾಪ್ರಾಧಿಕಾರದಲ್ಲಿ ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ ನೀಡಿ ಅರ್ಜಿ ಪಡೆಯಬಹುದಾಗಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶ ಸಂತೋಷ್ ಹೆಚ್ ಎಂ, ಅರೆಕಾಲಿಕ ಸ್ವಯಂ ಸೇವಕಾ ಕಾನೂನು ಮಿತ್ರ ಎಂದು ಕರೆಯಲಾಗಿದೆ. ಪ್ರತಿ ತಾಲೂಕಿನಲ್ಲಿ 25-50 ಜನ, ಜಿಲ್ಲೆಯಲ್ಲಿ 50-100 ಜನರನ್ನ ನೇಮಿಸಿಕೊಳ್ಳಲಾಗುತ್ತದೆ.  ಯಾರಿಗೆ ಸೇವ ಕೆಲಸದಲ್ಲಿ ಆಸಕ್ತಿ ಇದೆಯೋ ಅವರಿಗೆ ಈ ಕೆಲಸ ದೊರಯಲಿದೆ ಎಂದರು. 

ತ್ರಿಸದಸ್ಯ ಪೀಠದಲ್ಲಿ ಜಿಲ್ಲಾ ನ್ಯಾಯಾಧೀಶರು,  ನಾನು ಮತ್ತು ಸರ್ಕಾರಿ ನಾಮನಿರ್ದೇಶಕರಿದ್ದಾರೆ. ತಾಲೂಕು ಮಟ್ಟದಲ್ಲಿ ತಾಲೂಕು ನ್ಯಾಯಾಧೀಶರು, ನಾನು ಮತ್ತು ನಾಮನಿರ್ದೇಶಕರಿರುತ್ತಾರೆ. ನೇಮಕಾತಿ ಪಡೆದವರಿಗೆ ತರಬೇತಿ ಇರುತ್ತದೆ. ಅವರಿಗೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಗುರುತಿನ ಚೀಟಿ ಕೊಡಲಾಗುವುದು. ಕಾನೂನು ಮಿತ್ರರು ಕಾನೂನು ಶಿಕ್ಷಣ ಪಡೆದವರಲ್ಲ. ಇವರು ಸಮಾಜದಲ್ಲಿ ಗುರುತರ ಕೆಲಸ ಮಾಡಿಕೊಂಡವರಲ್ಲಿರುತ್ತಾರೆ. 

ಪೋಕ್ಸೋ ಪ್ರಕರಣದಲ್ಲಿ, ಸರ್ಕಾರಿ ಶಾಲೆಯ ಮಾಹಿತಿ ಪಡೆದು ಪೋಟೊ ಸಮೇತ ವರದಿ ನೀಡಬೇಕು. ಮಧ್ಯಸ್ಥಿಕೆದಾರರಾಗಿ ಕೆಲಸ ಮಾಡಬೇಕಾಗುತ್ತದೆ. ಲೋಕಾದಾಲತ್ ಬಗ್ಗೆ ಜನರಿಗೆ ಅರಿವು ಮೂಡಸುತ್ತಾರೆ. ಹ್ಯೂಮನ್ ಟ್ರಾಫಿಕ್,  ಬಾಲಕಾರ್ಮಿಕ ಪದ್ಧತಿ ಕಂಡು ಬಂದರೆ ನಮಗೂ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಾರೆ. ನೇಮಕಾತಿ ಆಯ್ಕೆ ಪಟ್ಟಿಯನ್ನ   ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ. ಅದನ್ನ ಅ.20 ರೊಳಗೆ ನೀಡುತ್ತೇವೆ ಎಂದರು. 

15100 ಕಾನೂನು ಸಹಾಯವಾಣಿ ತೆರಲಾಗಿದೆ. ಇಲ್ಲಿ ಕರೆಮಾಡಿದರೆ ಕಾನೂನು ಸಲಹೆ ನೀಡಲಾಗುವುದು ಎಂದು ತಿಳಿಸಿದರು. 

Applications are invited for the post of part-time volunteer at the Legal Services Authority.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close