SUDDILIVE || SHIKARIPURA
ಶಿಕಾರಿಪುರದಲ್ಲಿ ವಿಚಾರಣೆ ಎದುರಿಸಿದ ಹರಿಹರ ಶಾಸಕರು-Harihar MLAs face trial in Shikaripura
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಹರಿಹರ ಶಾಸಕ ಬಿಪಿ ಹರೀಶ್ ಅವರು ಸೋಮವಾರ ಪಟ್ಟಣದ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.
ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಕೇಶವ್ ಅವರು ವಿಚಾರಣೆಗೆ ಹಾಜರಾಗುವಂತೆ ಬಿಪಿ ಹರೀಶ್ ಅವರಿಗೆ ನೋಟಿಸ್ ನೀಡಿದ್ದರು ಶಾಸಕ ಬಿಪಿ ಹರೀಶ್ ಪಟ್ಟಣ ಠಾಣೆಗೆ ನೆನ್ನೆ ಬೆಳಿಗ್ಗೆ 11:30 ಕ್ಕೆ ಆಗಮಿಸಿ ಡಿವೈಎಸ್ಪಿ ಕೇಶವ್ ಎದುರು ವಿಚಾರಣೆ ಎದುರಿಸಿದರು.
ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಜಿಲ್ಲಾ ವರಿಷ್ಠಾಧಿಕಾರಿ ಕುರಿತು ವೈಯಕ್ತಿಕ ಟೀಕೆ ನನ್ನ ಉದ್ದೇಶವಲ್ಲ ವ್ಯವಸ್ಥೆಯಲ್ಲಿ ಅತಿ ಓಲೈಕೆ ಸರಿಯಲ್ಲ. ಯಾರಿಗೆ ಎಷ್ಟು ಮಾನ್ಯತೆ ನೀಡಬೇಕು ಅಷ್ಟು ನೀಡಬೇಕು. ತನ್ಮೂಲಕ ಜನರಿಗೆ ವ್ಯವಸ್ಥೆ ಮೇಲೆ ಗೌರವ ತರುವಂತೆ ನಡೆದುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ನೆಲದ ಕಾನೂನಿನ ಮೇಲೆ ಗೌರವ ಇದೆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದರು.
Harihar MLAs face trial in Shikaripura
