SUDDILIVE || SHIVAMOGGA
ಸಚಿವ ಸಂಪುಟ ಅನುಮತಿ ಪಡೆದು ಅತಿಥಿ ಉಪನ್ಯಾಸಕರನ್ನ ನೇಮಿಸಿಕೊಳ್ಳಿ-Appoint guest lecturers with Cabinet approval
11 ಸಾವಿರ ಜನ ಅತಿಥಿ ಉಪನ್ಯಾಸಕರನ್ನ ಯುಜಿಸಿ ಅರ್ಹತೆ ಪಡೆದಿಲ್ಲ ಮತ್ತು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಕೌನ್ಸಿಲಿಂಗ್ ಆಗಿಲ್ಲ. ನ್ಯಾಯಾಲಯ ತೋರಿಸಿ ತಡಮಾಡಲಾಗುತ್ತಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಡಾ.ಸೋಮಶೇಖರ್ ಹೆಚ್ ಶಿವಮೊಗ್ಗಿ ಮಾತನಾಡಿ, ಈ ಪ್ರಕ್ರಿಯೆಯನ್ನ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ನೇಮಕಾತಿ ಮಾಡಿಕೊಳ್ಳಬೇಕು. ಒಂದು ವೇಳೆ ಆಗದಿದ್ದರೆ, ಮೈಸೂರಿನಲ್ಲಿ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಯಲಿದೆ. ಹತ್ತಾರು ವರ್ಷದಿಂದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗಲಿರುವುದರಿಂದ ಪ್ರತಿಭಟನೆ ಅನಿವಾರ್ಯ ಎಂದರು.
Appoint guest lecturers with Cabinet approval

