SUDDILIVE || SHIVAMOGGA
ಸೆ.12 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ, ಯಾಕೆಗೊತ್ತಾ? Indefinite strike will be held from sept.12
ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ. 12 ರಿಂದ ಪ್ರತಿದಿನ ಪ್ರತಿಭಟನೆ ನಡೆಸಲು ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಅಶೋಕ ನಾಯ್ಕ್, ಈ ಪ್ರತಿಭಟನೆಯನ್ನ ಅನಿರ್ದಿಷ್ಟಾವಧಿಯ ವರೆಗೆ ನಡೆಸಲಾಗುತ್ತಿದೆ. ಸಾಂಸ್ಕೃತಿಕ, ಅರೆಬೆತ್ತಲೆ, ಬಂಜಾರ ಕಸೂಬುಗಳನ್ನ ಪ್ರದರ್ಶಿಸಿ ಪ್ರತಿದಿನ ಹೋರಾಟ ನಡೆಸಲಾಗುತ್ತಿದೆ. ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳುತ್ತಿದ್ದೇವೆ. ಬೆಳಿಗ್ಗೆಯಿಂದ ಸಾಂಕಾಲದ ವರೆಗೆ ಮಾತ್ರ ಪ್ರತಿಭಟನೆಯಿರುತ್ತ ಎಂದರು.
ನಮ್ಮಬಂಜಾರ ಸಮುದಾಯದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿತ್ತು. ವಿಶ್ವಾಸ ಬಿದ್ದು ಹೋಗಿದ್ದು, ಮೀಸಲಾತಿ ನಮ್ಮ ಹಕ್ಕು ಭಿಕ್ಷೆಯಲ್ಲ ಈ ಹಿನ್ನಲೆಯಲ್ಲಿ ಪ್ರತಿಭಟಿಸಲಾಗುತ್ತಿದೆ ಎಂದರು.
ಸ್ಪರ್ಶ, ಅಸ್ಪೃಶ್ಯ ಎಙದು ಅಸಂವಿಧಾನಿಕ ಪದ ಬಳಕೆ ಮಾಡಿರುವುದರ ಹಿಂದೆ ಯಾವ ತಂತ್ರಗಾರಿಕೆಯಿದೆ. ಪರಿಶಿಷ್ಠ ಜಾತಿಗಳಲ್ಲಿ ಬರುವ ಎಲ್ಲಾ ಜಾತಿಗಳು ಶೋಷಿತ ಹಾಗೂ ದಮನಿತ ಸಮುದಾಯಗಳೇ ಆಗಿರುವಾಗ ಸ್ಪೃಶ್ಯ ಅಸ್ಪೃಶ್ಯ ಎಂದು ವಿಂಗಡಿಸುವ ಅಗತ್ಯವೇನಿತ್ತು ಎಂದು ಆಗ್ರಹಿಸಲಾಗಿದೆ.
Indefinite strike will be held from sept.12

