SUDDILIVE || SHIVAMOGGA
ಅವೈಜ್ಞಾನಿಕ ಮೀಸಲಾತಿ ಕುರಿತು ಬಂಜಾರ ಸಂಘಟನೆ ಪ್ರತಿಭಟನೆ-Banjara organization protests over incomplete reservation
ರಾಜ್ಯ ಸರ್ಕಾರ ಮೀಸಲಾತಿ ವರ್ಗೀಕರಣದಲ್ಲಿ ಅವೈಜ್ಞಾನಿಕವಾಗಿದ್ದರಿಂದ ಒಳಮಿಸಲಾತಿಗೆ ನಮ್ಮ ವಿರೋಧವಿದೆ ಎಂದೂ ಶಶಿಕುಮಾರ ಬಂಜಾರ ಸಮಾಜದ ಪ್ರಮುಖರು ತಿಳಿಸಿದ್ದಾರೆ.ಬಿ.ಜೆ.ಪಿ.ಈಗಿನ ಕಾಂಗ್ರೆಸ್ ಸರ್ಕಾರ ಮಾಡಿರುವ ವರ್ಗೀಕರಣ ಖಂಡಿಸಿ ನ್ಯಾಯಯುತವಾಗಿ ಮೀಸಲಾತಿಯಲ್ಲಿ ಬರುವ ಎಲ್ಲಾ ಸಮೂದಾಯಕ್ಕೆ ಅನ್ಯಾಯವಾಗದೇ ಸರಿಯಾದ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ
ಒಳಮೀಸಲಾತಿಯೇ ಬೇಡ ಎಂಬುದು ಬಂಜಾರ ಸಮುದಾಯದ ನಿಲುವಿತ್ತು. ಒಳಮೀಸಲಾತಿಯ ವರ್ಗಿಕರಣವನ್ನ ನಡೆಸಿರುವುದೇ ತಪ್ಪು ಎಂದು ನಮ್ಮನಿಲುವು ಎಂದು ಜಿಲ್ಲಾ ಬಂಜಾರ ಸಮಾಜ ಪ್ರತಿಭಟಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರಾದ ಶಶಿಕುಮಾರ್, ಮೇಲ್ವರ್ಗಕ್ಕೆ ಸಮುದಾಯವನ್ನ ತೆಗೆದುಕೊಂಡು ಹೋಗಬೇಕು ಎಂಬುದು ಸಂವಿಧಾನದಲ್ಲಿದೆ. ಮೀಸಲಾತಿಯನ್ನ ವೈಜ್ಞಾನಿಕವಾಗಿ ಮಾಡದೆ ಒಂದಿಷ್ಟು ಸಮುದಾಯಕ್ಕೆ ಒಳ ಮೀಸಲಾತಿ ನೀಡಿ ಇತರೆ ಉಳಿದ ಸಮುದಾಯವನ್ನ ಸಂವಿಧಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಹೇಳಿದರು.
Banjara organization protests over incomplete reservation