ಮುಸ್ಲೀಂ ಧರ್ಮಕ್ಕೆ ಹೋಗುವ ದಿನಾಂಕವನ್ನ ಭದ್ರಾವತಿ ಶಾಸಕರು ಫಿಕ್ಸ್ ಮಾಡಿಕೊಂಡು ತೊಲಗಲಿ-ರವಿಕುಮಾರ್-Bhadravati MLAs should fix the date of converting to Islam and then leave - Ravikumar

 SUDDILIVE || SHIVAMOGGA

ಮುಸ್ಲೀಂ ಧರ್ಮಕ್ಕೆ ಹೋಗುವ ದಿನಾಂಕವನ್ನ ಭದ್ರಾವತಿ ಶಾಸಕರು ಫಿಕ್ಸ್ ಮಾಡಿಕೊಂಡು ತೊಲಗಲಿ-ರವಿಕುಮಾರ್-Bhadravati MLAs should fix the date of converting to Islam and then leave - Ravikumar


Bhadravathi, Ravikumar


ಹಬ್ಬ ಎಂದರೆ ಸಂಭ್ರಮ, ಖುಷಿ ಸಂತೋಷದಿಂದ ಕೂಡಿರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಇವುಗಳು ವಿಘ್ನಗೊಳ್ಳುತ್ತದೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಎಂದು ಎಂಎಲ್ ಸಿ ರವಿಕುಮಾರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಘ್ನವಿನಾಯಕನಿಗೆ ನಿವಾರಣೆಯಾಗಬೇಕೆ ಎಂದರೆ ಈ ಸರ್ಕಾರ ಹೋಗಬೇಕು. ಮತಬ್ಯಾಂಕಿಗಾಗಿ ಓಲೈಕೆ ರಾಜಕಾರಾಣ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಹಿಂದೂ ಸಮಾಜ ಉನ್ನತ ಗೌರವ ಕೊಟ್ಟಿದೆ. ಭದ್ರಾವತಿ ಶಾಸಕರು ಮುಸ್ಲೀಂ ಧರ್ಮದಲ್ಲಿ ಹುಟ್ಟಲು ಇಚ್ಛೆಪಡುತ್ತೇನೆ. ಹಿಂದೂ ಧರ್ಮಕ್ಕಿಂತ ಮುಸ್ಲೀಂ ಧರ್ಮವೇ ಮೇಲು ಎಂದು ಅನಿಸಿದರೆ ಆದಷ್ಟು ಬೇಗ ತೊಲಗಲಿ. ಮತಾಂತರಗೊಳ್ಳುವ ದಿನಾಂಕವನ್ನ ನಿಶ್ಚಯಿಸಿ ಎಂದರು.

ಮದ್ದೂರಿನಲ್ಲಿ ಪೂರ್ವಯೋಜಿತ ಕಾರ್ಯಕ್ರಮವಾಗಿದೆ. ಗಲಾಟೆ ಮಾಡಿದವರನ್ನ ಮುಸ್ಲೀಂ ಧರ್ಮದವರೇ ಖಂಡಿಸಿದ್ದಾರೆ. ಎಲ್ಲಾ ಮುಸ್ಲೀಂರು ಹಿಙದೂ ವಿರೋಧಿ ಮನಸ್ಥಿತಿಯಲ್ಲಿ ಇಲ್ಲ. ಈ ತರಹದ ಗಲಾಟೆಗೆ, ಉತ್ಸವಕ್ಕೆ ತೊಂದರೆ ಆಗುತ್ತಿರುವುದು ಸಿದ್ದರಾಮಯ್ಯ ಸರ್ಕಾರವಾಗಿದೆ. ಅನ್ಯಧರ್ಮಿಯರ ಮೇಲಿನ ಕೇಸ್ ಗಳನ್ನ ತೆಗೆದು ಹಾಕಿದ ಪರಿಣಾಮ ಈ ಗಲಭೆ ಸೃಷ್ಠಿಯಾಗಿದೆ. ಕೆಚ್ಚಲು ಕತ್ತರಿಸಿದವನ ವಿರುದ್ಧ ಕೇಸ್ ತೆಗೆದುಹಾಕಲಾಗಿದೆ. ಮದ್ದೂರಿನಲ್ಲಿ ವಿದ್ಯುತ್ ತೆಗೆದು ಕಲ್ಲು ದೊಣ್ಣೆ ಹಿಡಿದು ಗಲಭೆ ಸೃಷ್ಠಿ ಮಾಡಲು ಕಾರಣವಾಗಿದೆ. ಇದು ಯಾರ ಕುಮ್ಮಕ್ಕು ಎಂದು ಪ್ರಶ್ನಿಸಿದರು. 

ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆಕೋರರ ಮೇಲಿನ ಕೇಸ್ ತೆಗೆದುಹಾಕಲಾಯಿತು. ಮುಸ್ಲೀಂರಿಗೆ 4% ಮೀಸಲಾತಿ, ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎನ್ನುತ್ತಾರೆ. ವಿಧಾನ ಸಭೆಯ ರಾಜ್ಯಸಭೆ ಆಯ್ಕೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎನ್ನಲಾಯಿತು. ವಸತಿಯಲ್ಲಿ 15% ಮೀಸಲಾತಿ ನೀಡಲಾಗಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಟಿಪ್ಪುದರ್ಬಾರ್ ನಡೆಯುತ್ತಿದೆ ಎಂದು ದೂರಿದರು. 

ಮುಸ್ಲೀಂರಿಗೆ ಹಮಾರ ಗವರ್ನಮೆಂಟ್ ಎಂಬ ಭಾವನೆ ಉಂಟಾಗಿದೆ. ಈ ಮೂಲಕ ಅವರಿಗೆ ಕುಮ್ಮಕ್ಕು ನೀಡಲಾಗಿದೆ. ಡಿಜೆಗೆ ಅನುಮತಿಯಿಲ್ಲ, ಘೋಷಣೆ ಕೂಗುವಹಾಗಿಲ್ಲ ಎಂದು ಸರ್ಕಾರ ಹೇಳುತ್ತಿದೆ. ನಾವೇನು ಶವಯಾತ್ರೆ ನಡೆಸುತ್ತಿದ್ದೀವ ಎಂದು ದೂರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗುತ್ತಿರುವುದು ಯಾರಿಂದ? ವರದಿಯಿದೆಯಾ ಎಂದು ಪ್ರಶ್ನಿಸಿದರು. 

ಚಿತ್ರದುರ್ಗದಲ್ಲಿ ಗಣಪತಿ ಉತ್ಸವಕ್ಕೆ ಡಿಜೆಗೆ ಅನುಮತಿ ನೀಡಬೇಕು. ಚರ್ಚು ಮತ್ತು ಮಸೀದಿ ಬಳಿ ಗಣಪತಿ ಮೆರವಣಿಗೆ ಹೋದರೆ ನಿರ್ಬಂಧವಿದೆಯಾ? ಗಣಪತಿಹಬ್ಬವನ್ನ ಸಡಗರದಿಂದ ನಡೆಯಬೇಕು. ಭದ್ರಾವತಿ ಶಾಸಕರು ಆದಷ್ಟು ಬೇಗ ಮುಸ್ಲೀಂ ಧರ್ಮಕ್ಕೆ ಮತಾಂತರಗೊಳ್ಳುವ ದಿನಾಂಕ ಫಿಕ್ಸ್ ಮಾಡಿಕೊಂಡು ತೊಲಗಲಿ ಎಂದು ಗುಡುಗಿದರು. 

ಹಿಂದೂಗಳ ಮತಬೇಡ ಎಂದು ಕಾಂಗ್ರೆಸ್ ಹೇಳಲಿ. 136 ಸ್ಥಾನ ಕೇವಲ ಮುಸ್ಲೀಂರಿಂದ ದೊರೆತಿದ್ಯಾ? ಎಂದು ಪ್ರಶ್ನಿಸಿದ ಅವರು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಸರ್ಕಾರದ ನಿಲುವು ಪ್ರಕಟಿಸಲಿ ನಂತರ ಬಿಜೆಪಿ ಅದನ್ನ ಸ್ಪಷ್ಠೀಕರಿಸಲಿದೆ ಎಂದರು.

Bhadravati MLAs should fix the date of converting to Islam and then leave - Ravikumar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close