SUDDILIVE || BHADRAVATHI
ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಅನ್ಯ ಕೋಮಿನ ಯುವಕರಿಂದ ಹಲ್ಲೆ-Attacked by youths from another community for informing the police
ಕಳೆದ ವರ್ಷ ಈದ್ ಮತ್ತು ಗಣಪತಿ ಹಬ್ಬದ ಸಂಬಂಧ ತಿಪ್ಲಾಪುರ ಕ್ಯಾಂಪ್ ನಲ್ಲಿ ನಡೆದ ಶಾಂತಿ ಸಭೆಯ ವೇಳೆ ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಓಡಾಡಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆದಿರುವುದಾಗಿ ಎಫ್ಐಆರ್ ದಾಖಲಾಗಿದೆ.
ಶಾಂತಿ ಸಭೆ ನಡೆಯುವಾಗ ಜಹೇದ್, ಫರಾನ್ ಹಾಗೂ ಇಮ್ರಾನ್ ಯಾನೆ ಅಂಡು ಎಂಬುವರು ಕರ್ಕಶ ಶಬ್ದ ಮಾಡಿಕೊಂಡು ಓಡಾಡಿದ್ದು ಈ ಬಗ್ಗೆ ಜಯನಗರ ಗ್ರಾಮದ ಯುವಕ ಚಂದನ್ ಎಂಬುವನು ಪೊಲೀಸರಿಗೆ ಮಾಹಿತಿ ನೀಡಿದ್ದನು. ಇದನ್ನೇ ತಲೆಯಲ್ಲಿ ಇಟ್ಟುಕೊಂಡು ದ್ವೇಷಕಾರಿದ ಯುವಕರು ಮೊನ್ನೆ ದಿನ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಚಂದನ್ (22) ತಮ್ಮ ತಂದೆಯ ಜೊತೆ ಜಯನಗರ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಆತನ ಮನೆಯ ಮುಂದೆ ಬಂದ ತಿಪ್ಲಾಪುರದ ಈ ಮೂವರು ಯುವಕರು ಮನೆಯಿಂದ ಹೊರಗಡೆ ಕರೆದು ಸೆ.8 ರಂದು ಪಂಚಿನಿಂದ ಹಲ್ಲೆ ನಡೆಸಿದ್ದಾರೆ.
ಮಗನನ್ನ ಹೊಡೆಯುವುದನ್ನ ಕಂಡು ಹೊರಗೆ ಬಂದ ಚಂದನ ತಂದೆಯವರಿಗೂ ಈ ಮೂವರು ಅವ್ಯಾಚ್ಯ ಶಬ್ದಗಳಿಂದ ಬೈದು ಇನ್ನಮ್ಮೆ ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸುದ್ದಿಲೈವ್ ನಲ್ಲಿ ಸುದ್ದಿ ಬಿತ್ತರಿಸಲಾಗಿತ್ತು. ಜಯನಗರ ಗ್ರಾಮದಲ್ಲಿ ಈದ್ ಮೆರವಣಿಗೆಯ ಮುನ್ನ ಅಡ್ಡದಿಡ್ಡಿ ಚಲಾಯಿಸಿದ್ದಕ್ಕೆ ಹಲ್ಲೆ ಎಂದು. ಈಗ ಗ್ರಾಮಾಂತರ ಠಾಣೆಯಲ್ಲಿ ಈ ರೀತಿ ದೂರು ದಾಖಲಾಗಿದೆ.
Attacked by youths from another community for informing the police


