SUDDILIVE || SHIVAMOGGA
ವಿವಿಧ ಭಂಗಿಯ ದೇಹದಾರ್ಢ್ಯ ಸ್ಪರ್ಧೆ-Bodybuilding competition in various poses
ದೇಹದಾರ್ಡ್ಯಸ್ಪರ್ಧೆಯು ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ನಡೆದಿದೆ. ಮಹಾನಗರ ಪಾಲಿಕೆ ಐಬಿಬಿಎಫ್ ಮತ್ತು ಕೆಎಬಿಬಿ, ಜಿಲ್ಲಾ ದೇಹದಾರ್ಡ್ಯ ಪಟುಗಳ ಸಂಘದವತಿಯಿಂದ ಯುವ ದಸರಾದ ಅಂಗವಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆ ನಡೆದಿದೆ.
ರಾಜ್ಯ ಮಟ್ಟದಲ್ಲಿ 138 ಪಟುಗಳು ಭಾಗಿಯಾಗಿದರೆ, ಜಿಲ್ಲಾ ಮಟ್ಟದಿಂದ 68 ಜನ ಸ್ಪರ್ಧಿಗಳು ವಿವಿಧ ಭಂಗಿ ನೀಡಿ ಸ್ಪರ್ಧೆಗೆ ಕಿಚ್ಚುಹಚ್ಚಿದರು.85, 75, 70, 60, 55 ಕೆಜಿ ತೂಕದ ಮೇಲೆ ಸ್ಪರ್ಧೆ ನಡೆದಿದೆ. ದಸರಾ ಅಂಗವಾಗಿ 2016 ರಲ್ಲಿ ಆರಂಭಗೊಂಡ ಈ ಸ್ಪರ್ಧೆಗೆ 10ನೇ ವರ್ಷದ ಸಂಭ್ರಮವೂ ಹೌದು!
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಚೆನ್ನಬಸಪ್ಪ, ದೇಹದಾರ್ಢ್ಯ ಪಟು ಯೋಗೀಶ್ ಎಂಬುವರು 10 ವರ್ಷದ ಹಿಂದೆ ಪಾಲಿಕೆ ಸದಸ್ಯನಾಗಿದ್ದಾಗ ಸ್ಪರ್ಧೆಗೆ ಅವಕಾಶ ಕೋರಿದ್ದರು. ಅವರ ಮೂಲಕ ಈ ಸ್ಪರ್ಧೆ 10 ನೇ ವರ್ಷಕ್ಕೆ ಕಾಲಿಟ್ಟಿದೆ. ಎಂದರು.
ಜಿಮ್ ಮತ್ತು ವೇಟ್ ಲಿಫ್ಟಿಂಗ್ ಎಲ್ಲೆಡೆ ಹೆಚ್ಚಾಗುತ್ತಿದೆ ಹಿಂದೆ ಗರಡಿ ಮನೆಯಿತ್ತು. ಈಗ ಅವು ಮುಚ್ಚುತ್ತಿವೆ. ಆ ಜಾಗವನ್ನ ವೇಟ್ ಲಿಫ್ಟಿಂಗ್ ಆವರಿಸಿಕೊಂಡಿದೆ. ಇನ್ನೂ ಈ ಸ್ಪರ್ಧೆ ಹೆಚ್ಚಾಗಿ ಬೆಳಲಿ ಎಂದು ಆಶಿಸಿದರು. ಎಂಎಲ್ ಸಿ ಡಾ.ಧನಂಜಯ ಸರ್ಜಿ, ಕಾಂಗ್ರೆಸ್ ನ ಮುಹೀಬ್ ಧೀರಾಜ್ ಹೊನ್ನವಿಲೆ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
7 ಜನ ಜಡ್ಜ್ ಗಳ ಸಮ್ಮುಖದಲ್ಲಿ ಈ ಸ್ಪರ್ಧೆ ನಡೆದಿದೆ. ವಿಜೇತರಿಗೆ ಬಹುಮಾನ ನೀಡಲಾಗುವುದು.
Bodybuilding competition in various poses

