SUDDILIVE || SHIVAMOGGA
ಉಟ್ಟ ಬಟ್ಟೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ-Man who went out in his clothes goes missing
ಪತ್ನಿಯೊಂದಿಗೆ ಜಗಳವಾಡಿದವಿಗೆ ಜಗಳ ಯಾಕೆ ಆಡುತ್ತಿದ್ದೀಯಾ ಎಂದು ತಂದೆ ಪ್ರಶ್ನಿಸಿದಕ್ಕೆ ಉಟ್ಟ ಬಟ್ಟೆಯಿಂದ ಹೊರಗಡೆ ಹೋದ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.
ಹೊಳಲೂರಿನ ಹೊಳೆಹಟ್ಟಿ ನಿವಾಸಿ ಪಾಲಾಕ್ಷಪ್ಪ ಎಂಬುವರ ಮಗನಾದ ದಿನೇಶ್(40) ಕಳೆದ ವಾರದ ಹಿಂದೆ ಮನೆ ಬಿಟ್ಟು ಹೋದವರು ಇದುವರೆಗೂ ವಾಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ದಿನೇಶ್ ಅವರ ಕುಟುಂಬ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲನ್ನು ಹತ್ತಿದೆ.
ಕಳೆದ ಆರು ವರ್ಷದ ಹಿಂದೆ ದಿನೇಶ್ ಚನ್ಗಿರಿ ನಿವಾಸಿ ಶೀಲಾ ಎಂಬವರನ್ನು ಮದುವೆಯಾಗಿದ್ದರು ಮದುವೆಯಾಗಿ ಆರು ವರ್ಷ ಕಳೆದರೂ ಇದುವರೆಗೆ ಮಕ್ಕಳಾಗಿಲ್ಲ ಎಂಬ ಕೊರಗು ದಿನೇಶ್ ಅವರಲ್ಲಿ ಕಾಡುತ್ತಿತ್ತು ಇದರಿಂದ ಅವರು ಮದ್ಯವ್ಯಸನಿ ಸಹ ಆಗಿರುವುದು ಅವರ ತಂದೆ ತಾಯಿಗೆ ಗೊತ್ತಾಗಿ ಬುದ್ಧಿವಾದ ಸಹ ಹೇಳಿದ್ದರು.
ಸೆ.16 ರಂದು ದಿನೇಶ್ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ತಂದೆ ಯಾಕೆ ಹಗಳವಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಉಟ್ಟ ಬಟ್ಟೆಯಲ್ಲಿ ಕೋಪಗೊಂಡು ಮಬೆಯಿಂದ ಹೊರಗೆ ನಡೆದ ದಿನೇಶ್ ಸ್ಪ್ಲೆಂಡರ್ ಬೈಕ್ ಏರಿ ಹೊರಗೆ ಹೋದವರು ಇದುವರೆಗೂ ವಾಪಾಸ್ ಆಗಿಲ್ಲ. ಈ ಕುರಿತು ಕುಟುಂಬ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಒಂದು ವೇಳೆ ವ್ಯಕ್ತಿ ಕಂಡು ಬಂದರೆ ಶ್ರೀನಿವಾಸ್:- 99018 74802 ಅಥವಾ ಉಮೇಶಪ್ಪ :- 9008874549 ಅಥವಾ ಮಲ್ಲೇಶಪ್ಪ :- 9964061395 ಸಂಪರ್ಕಿಸಬಹುದಾಗಿದೆ.
Man who went out in his clothes goes missing
