SUDDILIVE || SHIVAMOGGA
ದೀವರು ಬೇಡ ಈಡಿಗ ಎಂದು ಸಮೀಕ್ಷೆಯಲ್ಲಿ ಬರೆಯಿಸಲು ಕರೆ-Call to write Eediga in the survey
ರಾಜ್ಯ ಸರ್ಕಾರದ ಜಾತಿಗಣತಿಯ ಸಮೀಕ್ಷೆಯಲ್ಲಿ ಈಡಿಗ ಸಮಾಜ ಭಿನ್ನಾಭಿಪ್ರಾಯ ಮೂಡಿದೆ. ಈಡಿಗ ಬಿಟ್ಟು ದೀವರು ಎಂದು ಬರೆಸಲು ಕರೆಕೊಟ್ಟಿದ್ದ ಒಙದು ಗುಂಪಿಗೆ ಮತ್ತೊಂದು ಸಂಘಟನೆ ಸುದ್ದಿಗೋಷ್ಠಿ ನಡೆಸಿ ಈಡಿಗರೆಲ್ಲಾ ಈಡಿಗರು ಎಂದು ಬರೆಯಿಸಲು ಕರೆ ನೀಡಿದೆ.
ಆರ್ಯ ಈಡಿಗ ಸಂಘಟದ ಅಜ್ಜಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಾಗರ, ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಈಡಿಗರು ಸರ್ವೆ ಕಾಲಂನಲ್ಲಿ 9ರಲ್ಲಿ ದೀವರು ಎಂದು ಮತ್ತು ಸಮೀಕ್ಷೆಯ ಕಾಲಂ 10 ರಲ್ಲಿ ಈಡಿಗ ಎಂದು ಬರೆಸಬೇಕು. ಕಾಲಂ 8 ರಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿದ್ದಾರೆ.
40 ವರ್ಷದಿಂದ ಈಡಿಗ ಎಂದು ನಮ್ಮ ದಾಖಲಾತಿಗಳಲ್ಲಿ ಬರೆಯಿಸಿಕೊಂಡು ಬಂದಿದ್ದೇವೆ. ಈಗ ಈಡಿಗ ಬೇಡ ದೀವರು ಬರೆಯಿಸಿ ಎಂದು ಕರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ದೀವರು ಎಂದು ಬರೆಯಿಸಲು ಕರೆಕೊಟ್ಟಿರುವುದು ಒಂದು ಗುಂಪು ಬಿಟ್ಟರೆ ಈಡಿಗ ಸಮಾಜ ಹೇಳಿಲ್ಲ. ಸಮೀಕ್ಷೆಯಲ್ಲಿ ದೀವರು ಎಂಬುದೇ ಇಲ್ಲ. ದೀವರ ಮಕ್ಕಳು ಎಂದು ಇದೆ. ಹಾಗಾಗಿ ಈಡಿಗರು ಎಂದು ಬರೆಯಿಸಿ ಎಂದರು.
ಆರ್ಯ ಈಡಿಗ ಎಂದು ಹೆಸರು ಹಾಕಿಕೊಂಡು ಅನುದಾನ ಪಡೆದು ಈಗ ದೀವರುಎಂದು ಜಿಲ್ಲಾ ಈಡಿಗ ಅಧ್ಯಕ್ಷರು ದೀವರು ಎಂದು ಬರೆಯಿಸಿ ಎಂದರೆ ಹೇಗೆ. ಯೋಗೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ರಿಪ್ಪನ್ ಪೇಟೆಯಲ್ಲಿ ಸಭೆ ನಡೆದಿದೆ. ನಮ್ಮಲ್ಲಿ 7-8 ಜನ ಸ್ವಾಮೀಜಿಗಳಿದ್ದಾರೆ. ಒಬ್ವರು ವೇದಿಕೆಯಲ್ಲಿ ಕರೆ ನೀಡಿದರೆ ಉಪಜಾತಿಯನ್ನ ಬರೆಯಬಹುದು ಎಂದು ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಪ್ರವೀಣ ಇರೇಗೋಡರು ಆಗ್ರಹಿಸಿದರು.
Call to write Eediga in the survey
