SUDDILIVE || SHIVAMOGGA
ಲೋಕಕಲ್ಯಾಣಾರ್ಥ ಸಲುವಾಗಿ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾ ಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶತಚಂಡಿಕ ಯಾಗ-Shatachandika Yaga at Sri Sharada Peetha
ಶಿವಮೊಗ್ಗ/ಕೂಡಲಿ: ತುಂಗಾ ಭದ್ರಗಳ ಸಂಗಮ ಕ್ಷೇತ್ರ ಶಿವಮೊಗ್ಗ ತಾಲ್ಲೂಕಿನಲ್ಲಿರುವ ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಅಲ್ಲಿ ನವರಾತ್ರಿ ಪ್ರಯುಕ್ತ ಲೋಕಲ್ಯಾಣಾರ್ಥಕ್ಕಾಗಿ ಶತ ಚಂಡಿಕ ಯಾಗವನ್ನು ಆಯೋಜಿಸಲಾಗಿದೆ.
ಶ್ರೀಮಠದ 71ನೇ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿದಿನ ವಿವಿಧ ಹೋಮಗಳು ನಡೆಯುತ್ತಿದ್ದು, ಅಕ್ಟೋಬರ್ 1 ಬುಧುವಾರ ಮಹಾನವಮಿಯ ಅಂದು ಶತಚಂಡಿಕ ಯಾಗ ನೆರವೇರಲಿದೆ.
ಶತಚಂಡಿಕ ಯಾಗವನ್ನು ಮತ್ತೂರಿನ ವಿದ್ವಾನ್ ಶ್ರೀ ಪ್ರದೀಪ್ ಅಗ್ನಿಹೋತ್ರಿ ಇವರ ನೇತೃತ್ವದಲ್ಲಿ ನಡೆಸುತ್ತಿದ್ದು, ಭಕ್ತಾದಿಗಳು ಈ ಯಾಗದಲ್ಲಿ ಪಾಲ್ಗೊಂಡು, ಜಗದ್ಗುರು ಮಹಾ ಸ್ವಾಮಿಗಳ ಮತ್ತು ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.ಮಾಹಿತಿಗಾಗಿ 9164185225, 9480544225, 9844570404 ಸಂಪರ್ಕಿಸಲು ಕೋರಿದೆ.
Shatachandika Yaga at Sri Sharada Peetha
