SUDDILIVE || BHADRAVATHI
ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ನ ಹಾವಳಿ, ಭದ್ರ ನದಿಯಿಂದ ಎಸ್ಕೇಪ್ ಆಯಿತು ಗ್ಯಾಂಗ್-Cheddi gang attacks Bhadravati, gang escapes from Bhadra river
ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ತಿರುಗಾಡಿರುವ ವಿಡಿಯೋ ಹರಿದಾಡುತ್ತಿದೆ. ಭದ್ರಾವತಿಯ ಸಿದ್ದರೂಢ ನಗರದಲ್ಲಿ 10 ಮನೆಗಳಲ್ಲಿ ಓಡಾಡಿ ನಂತರ ಪೊಲೀಸರು ಎದುರು ಬಂದಿದ್ದನ್ನನೋಡಿ ಭದ್ರ ನದಿಯಮೂಲಕ ಎಸ್ಕೇಪ್ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆಯಿಂದ ಭದ್ರಾವತಿ ಪೊಲೀಸರ ಕೈಗೆ ಬಂದೂಕುಗಳು ಬಂದಿರುವುದಾಗಿ ಸ್ಥಳೀಯರು ಹೇಳುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
ಭದ್ರಾವತಿಯ ಸಿದ್ದರೂಢ ನಗರದಲ್ಲಿ 10 ಮಬೆಗಳಿಗೆ 5-6 ಜನ ಚೆಡ್ಡಿ ಗ್ಯಾಂಗ್ ಮಾರಕಾಸ್ತ್ರಗಳನ್ನ ಹಿಡುದು ಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಾಲ್ಕೈದು ದಿನಗಳ ಹಿಂದೆ ಶಿವಮೊಗ್ಗದ ವಿದ್ಯಾನಗರದ ಚಾನೆಲ್ ಏರಿಯಾದಲ್ಲಿರುವ ಮನೆಯ ಬಳಿ ಕಂಡ ಚೆಡ್ಡಿ ಗ್ಯಾಂಗ್ ಮತ್ತೆ ಭದ್ರಾವತಿ ಈ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಡಾವಣೆಯ 10 ಮನೆಗಳಿಗೆ ಓಡಾಡಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಡಾ.ಅಶ್ವಥ್ ನಾರಾಯಣಬಾವರಬಮನೆಗೆ ಬಂದ ಚೆಡ್ಡಿಗ್ಯಾಂಗ್ ಅಡಿಗೆ ಮನೆ ಕಿಟಕಿ ತೆಗೆದಿದ್ದಾರೆ. ಇದರಿಂದ ಎಚ್ಚರಗೊಂಡ ವೈದ್ಯರ ಕುಟುಂಬ ಕೆಳಗೆ ಬಂದಿದೆ. ಇದೇ ವೇಳೆ ಎದುರಮನೆಯಲ್ಲಿ ಮಗುವೊಂದು ಅಳುತ್ತಿದ್ದ ಕಾರಣ ಲೈಟ್ ಹಾಕಲಾಗಿದೆ. ಇದನ್ನ ಕಂಡು ಚೆಡ್ಡಿ ಗ್ಯಾಂಗ್ ಪರಾರಿಯಾಗಿದೆ.
ಇದೇ ವೇಳೆ ಎದುರು ಬಂದ ಬೀಟ್ಸ್ ಪೊಲೀಸರನ್ನಕಂಡು ಪಕ್ಕದ ಭದ್ರಾನದಿಯಿಂದ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.
Cheddi gang attacks Bhadravati
