SUDDILIVE || SHIVAMOGGA
ಮಲ್ನಾಡು ಗೇಟ್ ವೇ ಬಳಿ ರಸ್ತೆ ಅಪಘಾತ ಇಬ್ಬರು ಸಾವು-Two killed in road accident near Malnadu Gateway
![]() |
| ಅಪಘಾತ ಸ್ಥಳಕ್ಕೆ ಅಡಿಷನ್ ಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. |
ಸಾಗರ ರಸ್ತೆಯ ಮಲ್ನಾಡು ಗೇಟ್ವೇ ಬಳಿ ಪುಟ್ಬಾತ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜನಗಳ ಮೇಲೆ ಬೈಕ ಹರಿದು ಬೈಕ್ ಸವಾರ ಹಾಗೂ ಟೆಂಟ್ ನಲ್ಲಿ ವಾಸವಾಗಿದ್ದ ಮಹಿಳೆಯರ್ವರು ಸಾವು ಕಂಡಿರುವ ಘಟನೆ ವರದಿಯಾಗಿದೆ.
ಫುಟ್ ಪಾತ್ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ವ್ಯಾಪಾರ ಮಾಡಿಕೊಂಡಿದ್ದ ದುರ್ಗಾ ಪ್ರಸಾದ್ ಎಂಬುವರು ಟೆಂಟ್ ಹಾಕಿಕೊಂಡು ಅಲ್ಲಿಯೇ ಜೀವನ ಸಾಧಿಸುತ್ತಿದ್ದರು. ಸುಮಾರು ನಾಲ್ಕು ವರ್ಷದಿಂದ ದುರ್ಗಾ ಪ್ರಸಾದ್ ಮತ್ತು ಅವರ ಕುಟುಂಬ ಅಲ್ಲೇ ವಾಸವಾಗಿದ್ದು ಪ್ಲಾಸ್ಟಿಕ್ ವ್ಯಾಪಾರವನ್ನು ಬೀದಿಬದಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಆಯನೂರು ಗೇಟಿನಿಂದ ಕೆ 14 ಈ ವೈ 1306 ಕ್ರಮ ಸಂಖ್ಯೆಯ ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಫುಟ್ಪಾತ್ ನಲ್ಲಿದ್ದ ಟೆಂಟ್ ಗೆ ಡಿಕ್ಕಿ ಹೊಡೆದಿದ್ದಾರೆ ಟೆಂಟ್ ನಲ್ಲಿ ದುರ್ಗಾ ಪ್ರಸಾದ್ ಅವರ ತಂದೆ ನಾಗಯ್ಯ ತಾಯಿ ಕಾವೇಶ್ವರಿ ಹಾಗೂ ತಂಗಿ ಜ್ಯೋತಿ ಎಂಬವರು ಇದ್ದರು ದುರ್ಗಾ ಪ್ರಸಾದರವರು ಮೂತ್ರ ವಿಸರ್ಜನೆಗೆಂದು ಬೆಳಗಿನ ಜಾವ ಐದು ಇಪ್ಪತ್ತಕ್ಕೆ ಟೆಂಟ್ ನಿಂದ ಹೊರ ಬಂದಾಗ ಈ ಘಟನೆ ನಡೆದಿದೆ.
ಬೈಕ್ ಅನ್ನು ಸುದರ್ಶನ್ ಎನ್ನುವರು ಚಲಾಯಿಸುತ್ತಿದ್ದು ಆತನ ಹಿಂದೆ ಆಕಾಶ ಎಂಬವನು ಕುಳಿತಿದ್ದನು ಆಕಾಶನಿಗೆ ತೀವ್ರವಾಗಿ ಗಾಯಗಳಾಗಿದ್ದು ಆತನನ್ನು ಮೆಗನ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುವಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಈ ಘಟನೆಯಲ್ಲಿ ತಲೆಗೆ ಹೊಡೆತ ಬಿದ್ದಿದ್ದ ಕಾಮೇಶ್ವರಿ ರವರು ಸಾವನ್ನಪ್ಪಿರುವುದಾಗಿ ಮೂಲಗಳು ದೃಢಪಡಿಸಿವೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Two killed in road accident near Malnadu Gateway

