ad

ಚೇತನ್ ಅಹಿಂಸಾರಿಂದ ಹೊಸ ಪಕ್ಷಗಳನ್ನ ಕಟ್ಟುವ ಚಿಂತನೆ-Chetana ahimsa idea of ​​forming new parties

 SUDDILIVE || SHIVAMOGGA

ಚೇತನ್ ಅಹಿಂಸಾರಿಂದ ಹೊಸ ಪಕ್ಷಗಳನ್ನ ಕಟ್ಟುವ ಚಿಂತನೆ-Chetana ahimsa idea of ​​forming new parties  

Chethan, ahimsa


ವ್ಯಸ್ಥೆಯೇ ಶತೃವಾಗಿದೆ. ಇದರ ವಿರುದ್ಧ ಪಕ್ಷವನ್ನ ಕಟ್ಟಲು ನಟ ಚೇತನ್ ಅಹಿಂಸಾ ನಿರ್ಧರಿಸಿದ್ದಾರೆ.  2027 ರಲ್ಲಿ ಈ ಪಕ್ಷ ಜಾರಿಯಾಗಲಿದ್ದು,ಮತಗಳನ್ನ ಹಣಕ್ಕೆ ಮಾರಾಟವಾಗಬಾರದು. ಮತ ಭಾವನೆಯೊಂದಿಗೆ ಬೆಸೆದಿದೆ ಎಂದು ಹೇಳಿದ್ದಾರೆ. 

ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಸ್ಥಿತಿ ವಿಷಯದಲ್ಲಿ ಮಾತನಾಡಿ ರಾಜಕೀಯ ಸ್ಥಾಪಿಸುವುದೇ ನಮ್ಮ ಹೋರಾಟವಾಗಿದೆ ಜಾತಿ ಧರ್ಮದಲ್ಲಿ ನಾವು ಹುಟ್ಟಿರುವುದು ಆಯ್ಕೆಯಿಂದ ಅಲ್ಲ ಆಕಸ್ಮಿಕದಿಂದ ಎಂದರು. 

2027 ರಲ್ಲಿ ಜಾಲನೆ ಸಿಕ್ಕರೆ ನಮಗೆ ಚುನಾವಣೆ ಎದುರಿಸಲು ಅನುಕೂಲವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೇ ನಮ್ಮ ಎದುರಾಳಿ ಎಂದು ಆರ್ಭಟಿಸಿದರು. 

ಸಂವಿದಾನದಲ್ಲಿ 2900 ಪಕ್ಷಗಳು ನೋಂದಣಿಯಾಗಿದೆ. ಇವರು ಯಾರೂ ಸಂವಿಧಾನ ಮೂಲ ಹಿತಸಕ್ತಿಗಳನ್ನ ಅನುಸರಿಸುತ್ತಿಲ್ಲ. ಅಂಬೇಡ್ಕರ್, ಪೆರಿಯಾರ್ ಮತ್ತು ಕಾನ್ಶಿರಾಮ್ ಅವರ ಆಶಯವನ್ನ ಹೊತ್ತ. ಬ್ರಾಹ್ಮಣ್ಯದ ವ್ಯವಸ್ಥೆಗೆ ಪ್ರತಿರೋಧ, ಬಂಡವಾಳ ವ್ಯವಸ್ಥೆ, ಲಿಂಗ ಅಸಮಾನತೆ ವ್ಯವಸ್ಥೆ ವಿರುದ್ಧ ಹೋರಾಡುವ ಪಕ್ಷ ಕಟ್ಟಲು ಸಿದ್ದರಾಗಬೇಕು ಎಂದರು. 

ಧರ್ಮನಿರಪೇಕ್ಷಿತಯ ಪುನರ್ ವ್ಯಾಖ್ಯಾನದಲ್ಲಿ ಧತ್ತಾಂಶದ ಆಧಾರದ ಅಭಿವೃದ್ಧಿಯಾಗಬೇಕು ಹೊರತು ಧರ್ಮ ಆಧಾರಿತ ಅಲ್ಲ. ಭಾಷಾ ಹಕ್ಕುಗಳು, ಸಾಂಸ್ಕೃತಿಕ ವಿಚಾರಗಳು ಪ್ರಾದೇಶಿಕತೆಯಾಗಿರಬೇಕು. ಭ್ರಷ್ಠಾಚಾರಿ ವಿರೋಧಿ ಎದುರು ಹೋರಾಟಬೇಕಿದೆ. ಶಿಕ್ಷಣ ಮತ್ತು ಆರೋಗ್ಯ ಬಂಡವಾಳದವರಾಗಿದೆ. ಪೊಲೀಸ್, ಜೈಲು ಮತ್ತು ನ್ಯಾಯಾಂಗ ಸುಧಾರಣೆಯಾಗಬೇಕಿದೆ ಎಂದರು. 

166 ನೇ ಚಳುವಳಿ ಸಭೆ ಶಿವಮೊಗ್ಗದಲ್ಲಿ ನಡೆದಿದೆ. ಒಮ್ಮತದ ಅಭಿಪ್ರಾಯವಿರಬೇಕು. ಸಿದ್ದಾಂತದಲ್ಲಿ ನಂಬಿಕೆ ಇರಬೇಕು. ಆರ್ಥಿಕ ಬದ್ಧತೆಯಿರಬೇಕು. ರಾಜಕೀಯ ಪಕ್ಷದ ರಚನೆ ಪಾಲಿಟ್ ಬ್ಯೂರೋ ಇರಬೇಕು ಎಂಬ 10 ಅಂಶದ ಆಧಾರದ ಮೇರೆಗೆ ಪಕ್ಷ ಕಟ್ಟಲು ಸಿದ್ದ ಎಂದರು.

Chetana ahimsa idea of ​​forming new parties

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close