SUDDILIVE || SHIVAMOGGA
ಮನೆಗಳ್ಳತನ ನಡೆಸಿದ ಆರೋಪಿಯ ಬಂಧನ-Arrest of house burglary suspect
ಹಾಡುಹಗಲೇ ಮನೆಗಳ್ಳತನ ನಡೆಸಿದ್ದ ವ್ಯಕ್ತಿಯನ್ನ ತುಂಗ ನಗರ ಪೊಲೀಸರು ಬಂಧಿಸಿ 22,74,500/- ರೂ ನಗದು 2) 130 ಗ್ರಾಂ ಬಂಗಾರದ ಆಭರಣ ಮೌಲ್ಯ 11,70,000/- ಮತ್ತು 3) 550 ಗ್ರಾಂ ಬೆಳ್ಳಿಯ ಆಭರಣಗಳ ಮೌಲ್ಯ 65,000/- ಸೇರಿ ಒಟ್ಟು 12,35,000/- ರೂ ನ ಬಂಗಾರ & ಬೆಳ್ಳಿಯ ಆಭರಣಗಳನ್ನ ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಪಾಲ ಗೌಡ ಬಡಾವಣೆ ಸಿ ಬ್ಲಾಕ್ , ನಲ್ಲಿ ಇತ್ತೀಚೆಗೆ ಹಗಲು ಸಮಯದಲ್ಲಿ ಮನೆಗಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎ ಜಿ ಕಾರಿಯಪ್ಪ ಮತ್ತು ರಮೇಶ ಕುಮಾರ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಬಾಬು ಆಂಜನಪ್ಪ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿ.ಐ ಕೆ ಟಿ ಗುರುರಾಜ್, ಹಾಗೂ ಸಿಬ್ಬಂದಿಯವರಾದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಮ್.ಜಿ, ಮಪಿಸಿಗಳಾದ ಶ್ರೀಮತಿ ಅನುಷಾ ಮತ್ತು ಕು। ಚೈತ್ರಾ ರವರಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ಹೆಚ್.ಸಿ ಇಂದ್ರೇಶ, ಗುರು, ಮತ್ತು ವಿಜಯ ಹಾಗೂ ಚಾಲಕರಾದ ಎ.ಹೆಚ್.ಸಿ ಪುನೀತ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿತನಾದ ಹಾಗೂ ಗೋಪಾಳದ ನಿವಾಸಿ ಅಶ್ರಫ್ ವುಲ್ಲಾ, 35 ವರ್ಷ ,(ಆಟೋ ಚಾಲಕ) ದಸ್ತಗಿರಿ ಮಾಡಿದೆ. ಆರೋಪಿತನಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1) 22,74,500/- ರೂ ನಗದು ಹಣ, 2) 130 ಗ್ರಾಂ ಬಂಗಾರದ ಆಭರಣ ಮೌಲ್ಯ 11,70,000/- ಮತ್ತು 3) 550 ಗ್ರಾಂ ಬೆಳ್ಳಿಯ ಆಭರಣಗಳು ಮೌಲ್ಯ 65,000/- ಸೇರಿ ಒಟ್ಟು 12,35,000/- ರೂ ನ ಬಂಗಾರ & ಬೆಳ್ಳಿಯ ಆಭರಣಗಳು ಹಾಗು 22,74,000/- ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹಾಲಿ ಆರೋಪಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Arrest of house burglary suspect