ad

ಬಿಪಿಎಲ್ ಕಾರ್ಡ್ ಹೊಂದಿ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನ ಕಳುಹಿಸುವವರ ಕಾರ್ಡ್ ರದ್ದುಗೊಳಿಸಲು ಆಗ್ರಹ- Demand to cancel the cards of those who have BPL cards and send them to private schools for their children

 SUDDILIVE || SHIVAMOGGA

ಬಿಪಿಎಲ್ ಕಾರ್ಡ್ ಹೊಂದಿ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನ ಕಳುಹಿಸುವವರ ಕಾರ್ಡ್ ರದ್ದುಗೊಳಿಸಲು ಆಗ್ರಹ-Demand to cancel the cards of those who have BPL cards and send them to private schools for their children

BPL, card

ಬಿ.ಪಿ.ಎಲ್ ಕಾರ್ಡ್ ಪಡೆದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ  ಕಾರ್ಡ್ ಗಳನ್ನ ಗಳನ್ನು ರದ್ದುಗೊಳಿಸುವಂತೆ ಜನಸಂಗ್ರಾಮ ಪರಿಷತ್ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆಗ್ರಹಿಸಿದೆ. 

ರಾಜ್ಯದ ಎಲ್ಲಾ ಸರಕಾರಿ ಶಾಲೆಗಳು ಸರಕಾರದ ಪವಿತ್ರವಾದ ಆಸ್ತಿಯಾಗಿರುತ್ತದೆ. ಅಮೂಲ್ಯವಾದ ಸರಕಾರಿ ಶಾಲೆಗಳನ್ನು ಸಂರಕ್ಷಿಸುವುದು ಸರಕಾರದ ಮುಖ್ಯ ಕರ್ತವ್ಯವಾಗಿರುತ್ತದೆ. ಇತ್ತೀಚಿನ ದಿನಮಾನದಲ್ಲಿ ವಿದ್ಯಾರ್ಥಿಗಳ ಪೋಷಕರುಗಳು ಆಂಗ್ಲ ಮಾದ್ಯಮದ ಹುಚ್ಚಾಸೆಯಿಂದ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.  

ಹೀಗಾಗಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳನ್ನು ಮುಂದಿನ ದಿನದಲ್ಲಿ ಮುಚ್ಚುವ ಸಂಭವ ಎದುರಾಗಿದೆ. ಸರಕಾರ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಹಾಗೂ ಸಂರಕ್ಷಿಸಬೇಕಾದರೆ ರಾಜ್ಯದಲ್ಲಿ ಶೇಕಡ 80%ರಷ್ಟು ಜನರು ನಾವು ಬಡವರೆಂದು ಬಿ.ಪಿ.ಎಲ್ ಕಾರ್ಡ್ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸರಕಾರ ಬಡತನ ರೇಖೆಯುಳ್ಳಂತಹ ವ್ಯಕ್ತಿಗಳನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದ ನಂತರ ಬಿಪಿಎಲ್ ಕಾರ್ಡ್ ಪಡೆದ ವ್ಯಕ್ತಿಗಳು/ಜನರು ಲಕ್ಷಾಂತರ ರೊಗಳನ್ನು ಖರ್ಚು ಮಾಡಿ ಅವರವರ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗೆ ಸೇರಿಸುತ್ತಿರುವುದು ಸತ್ಯವಾದ ಸಂಗತಿಯಾಗಿರುತ್ತದೆ. 

ಬಿಪಿಎಲ್ ಕಾರ್ಡ ಪಡೆದುಕೊಂಡು ಅವರವರ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದುಪ್ಪಟ್ಟು ಹಣ ಖರ್ಚು ಮಾಡಿ ಐಶಾರಾಮಿ ಶಾಲೆಗಳಿಗೆ ಸೇರಿಸುವ ಪೋಷಕರುಗಳು ಹಣ ಬಲಹೀನರಾಗಿರುವುದಿಲ್ಲ. ರಾಜ್ಯದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕಾದೆ ಹಾಗೂ ಸಂರಕ್ಷಿಸಬೇಕಾದರೆ ಸರಕಾರ, ಬಿಪಿಎಲ್ ಕಾರ್ಡ್ ಪಡೆದ ವ್ಯಕ್ತಿಗಳು ಅವರವರ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸಬೇಕು. ಇಲ್ಲವಾದರೆ ಬಿಪಿಎಲ್ ಕಾರ್ಡ ರದ್ದು ಮಾಡುವ ಆದೇಶ ಹೊರಡಿಸಿದಲ್ಲಿ ಸರಕಾರಿ ಶಾಲೆಗಳನ್ನು ಸಂರಕ್ಷಿಸಿದಂತಾಗುತ್ತದೆ. 

ಹಾಗೂ ನಮ್ಮ ರಾಜ್ಯದ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಎಂಟು, ಜ್ಞಾನಪೀಠ ಪ್ರಶಸ್ತಿ ವಿಜೇತರ ಆಶಯವನ್ನು ಕಾಪಾಡಿದಂತಾಗುತ್ತದೆ. ಆದ್ದರಿಂದ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿಯದೇ  ಸರಕಾರ ಅತೀ ಸೂಕ್ಷ್ಮ ಅಂಶಗಳನ್ನು ಪರಿಗಣಿಸುವುದರ ಜೊತೆಗೆ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾದ್ಯಮದ ಜೊತೆಗೆ ಆಂಗ್ಲ ಮಾದ್ಯಮ ಶಿಕ್ಷಣಕ್ಕೆ ಶಿಫಾರಸ್ಸು ಮಾಡಿ ಉತ್ತಮ ತರಬೇತಿಯುಳ್ಳ ಶಿಕ್ಷಕರನ್ನು ನೇಮಿಸಿ ಸರಕಾರದ ಪವಿತ್ರವಾದ ಶಾಲೆಗಳನ್ನು ಸಂರಕ್ಷಿಸಬೇಕಾಗಿ ಜನಸಂಗ್ರಾಮ್ ನ ಗಿರೀಶ್ ಆಚಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Demand to cancel the cards of those who have BPL cards and send them to private schools for their children

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close