ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಕರೆಯುವಂತೆ ಒತ್ತಾಯ

SUDDILIVE || SHIVAMOGGA

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಕರೆಯುವಂತೆ ಒತ್ತಾಯ-Demand to call for applications for BPL and APL cards

BPL, APL


ರಾಜ್ಯಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ  ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ  ವಿವಿಧ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳಿ 07 ತಿಂಗಳು ಕಳೆದರೂ ಯಾವುದೇ ಆದೇಶ ಹೊರಡಿಸಲಿಲ್ಲ ಕೂಡಲೇ ಆ ಆದೇಶವನ್ನು ಹೊರಡಿಸಬೇಕೆಂದು. ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಲ್ಲೂರು ಮೇಘರಾಜ ಆಗ್ರಹಿಸಿದರು

ಇಂದು  ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು.ಸಿದ್ದರಾಮಯ್ಯನವರ ಸರ್ಕಾರ ಬಿ. ಪಿ. ಎಲ್. ಕುಟುಂಬಗಳಿಗೆ ರಾಜ್ಯದ ಎಲ್ಲಾ ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್, ಎಂ. ಆರ್. ಐ ಸ್ಕ್ಯಾನ್, ಅಸ್ಟ್ರಾ ಸೌಂಡ್ ಹಾಗೂ ಅಂಗಾಂಗ ಕಸಿ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವುದಾಗಿ 2025 ರ ಜನವರಿ ತಿಂಗಳಲ್ಲಿ ಹೇಳಿತ್ತು ಆದರೆ  ಇದುವರೆಗೂ ಜಾರಿಯಾಗಲಿಲ್ಲ  ಇದರಿಂದಾಗಿ ಬಡವರು ಸೌಲಭ್ಯಗಳಿಂದ ವಂಚಿತಾಗುತ್ತಿದ್ದಾರೆ.ಕೂಡಲೇ ಅದನ್ನು ಜಾರಿಗೊಳಿಸಿ ಎಂದರು.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಕರೆಯಲು ಒತ್ತಾಯಿಸಿದ ಕಲ್ಲೂರು ಮೇಘರಾಜ್, ಹಿಂದಿನ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಹೊಸ ಬಿ.ಪಿ.ಎಲ್. ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳ ಪರಿಷ್ಕರಣೆ ಆಗಿರಲಿಲ್ಲ. ಇದು ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿತ್ತು. ಈಗ ಸಿದ್ದರಾಮಯ್ಯನವರ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದ ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿಲ್ಲ. ಇದರಿಂದಾಗಿ ಅನೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸರ್ಕಾರದ ವಿವಿಧ ಯೋಜನೆಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯುವ ಬೀಜ, ಗೊಬ್ಬರ, ಯಂತ್ರೋಪಕರಣಗಳು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, ಬಿಪಿಎಲ್ ಕಾರ್ಡ್ ಇಲ್ಲದೆ, ಬಡ ಕುಟುಂಬಗಳು ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಕಾರ್ಡ್ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. ಇದು ಬಡವರಿಗೆ ದೊರೆಯಬೇಕಾದ ಆರೋಗ್ಯ ಸೌಲಭ್ಯಗಳನ್ನೂ ತಪ್ಪಿಸಿದೆ ಎಂದು ಕಲ್ಲೂರು ಮೇಘರಾಜ್ ಆತಂಕ ವ್ಯಕ್ತಪಡಿಸಿದರು.

ಇದನ್ನು ನಿರ್ಲಕ್ಷಿಸಿದರೆ, ಬಡವರು ಸರ್ಕಾರದ ವಿರುದ್ಧ ದಂಗೆ ಏಳಬಹುದು ಎಂದು ಕಲ್ಲೂರು ಮೇಘರಾಜ್ ಎಚ್ಚರಿಕೆ ನೀಡಿದರು.ಈ ಪತ್ರಿಕಾಗೋಷ್ಠಿಯಲ್ಲಿ ಸಂಘಯ್ಯ,. ಜೀವನ ಗೌಡ, ಶ್ರೀಧರ ಕೋಡ್ಲು, ಶಂಕ್ರ ನಾಯ್ಕ್ ಮತ್ತು ಶಿವಣ್ಣ ಉಪಸ್ಥಿತರಿದ್ದರು.

Demand to call for applications for BPL and APL cards

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close