SUDDILIVE || SHIVAMOGGA
ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಸೌಹಾರ್ದತೆ ಮೆರೆದ ಹಿಂದೂ ಮುಸ್ಲೀಂ-Hindu-Muslim harmony seen in Tunga Nagar police station area
ಶಿವಮೊಗ್ಗದ ಹಲವೆಡೆ ಗಣಪತಿ ಕಮಿಟಿಯ ರಾಜಬೀದಿ ಉತ್ಸವ ಮತ್ತು ಇತರೆ ಕಾರ್ಯಕ್ರಮದಲ್ಲಿ ಸೌಹಾರ್ದತೆ ಮೆರೆಯಲಾಗಿದೆ. ಸೂಳೆಬೈಲಿನ ಕರುಮಾರಿಯಮ್ಮ ದೇವಸ್ಥಾನದ ಹಿಂದೂ ಮಹಾವೀರ ಯುವಕರ ಗಣಪತಿ ಮೆರವಣಿಗೆ ಸಮಯದಲ್ಲಿ ಮತ್ತು ದುರ್ಗಮ್ಮ ದೇವಸ್ಥಾನದಲ್ಲಿ ಹಿಂದೂ ಮುಸ್ಲೀಂ ಭಾವೈಕ್ಯತೆ ಕಂಡುಬಂದಿದೆ.
ಸೂಳೆಬೈಲ್ ದುರ್ಗಮ್ಮ ದೇವಸ್ಥಾನದ ಗಣಪತಿ ಕಮಿಟಿ ವತಿಯಿಂದ ಈ ದಿನ ಅನ್ನ ಸಂತರ್ಪಣೆ ಕಾರ್ಯಕ್ರಮ ಇದ್ದು, ಈ ಸಂದರ್ಭದಲ್ಲಿ ಸೂಳೆಬೈಲ್ ಜಟ್ ಪಟ್ ನಗರ ಮುಸ್ಲಿಂ ಬಾಂಧವರಾದ ಸಲೀಂ, ಗೌಸ್, ಇಮ್ರಾನ್, ತಾಜಾಮೂಲ್ ಇತರರಿಂದ ತಂಪು ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರೆ. ಇದಕ್ಕೆ ದುರ್ಗಮ್ಮ ದೇವಸ್ಥಾನದ ಕಮಿಟಿಯವರು ಧನ್ಯವಾದಗಳು ತಿಳಿಸಿದ್ದಾರೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲ್ ಕರುಮಾರಿಯಮ್ಮ ದೇವಸ್ಥಾನದ ಹಿಂದೂ ಮಹಾವೀರ ಯುವಕರ ಗಣಪತಿ ಮೆರವಣಿಗೆ ಸಮಯದಲ್ಲಿ ಸೂಳೆಬೈಲ್ ಸುನ್ನಿ ಮಕ್ಕಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಸಮೀಉಲ್ಲಾ, ಝುಬೈರ್, ಸಲೀಂ, ಕಲೀಂ, ಚಾಂದು,ಇಮ್ರಾನ್, ಜಾಕಿರ್ ಇತರ ಮುಖಂಡರುಗಳು ಗಣಪತಿಗೆ ಹೂವಿನ ಹಾರ ಹಾಕಿ ಭಕ್ತಿಪೂರಕವಾಗಿ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದಿದ್ದು, ಈ ಸಮಯ ಗಣಪತಿಯ ಕಮಿಟಿ ಸಂತೋಷ್,ನಾಗರಾಜ್, ಸಂತೋಷ್,ಹರೀಶ್, ಕಿರಣ್, ಉಪಸ್ಥಿತಿಯಿದ್ದು, ಮುಸ್ಲಿಂ ಬಾಂಧವರಿಗೆ ಹೃತ್ಪೂರಕವಾದ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ಈ ವೇಳೆ ತುಂಗಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಕೆ ಟಿ ಗುರುರಾಜ್ , Police inspector I ಮಧು ISD Ckm, PSI ಮಂಜಮ್ಮ,ASI ಮೋಹನ್, ASI ಶೇಖರ್, HC ಯಶವಂತ, PC ರಾಜು, ಪ್ರಶಾಂತ್, ನಾಗಪ್ಪ, ರಂಗನಾಥ್ ಇತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Hindu-Muslim harmony seen in Tunga Nagar police station area

