SUDDILIVE || SHIVAMOGGA
ಎಪಿಪಿ ನೇಮಕಾತಿಯಲ್ಲಿ ಮರುನೇಮಕಾತಿಗೊಂಡ ವಕಿಲರನ್ನ ವಜಾಗೊಳಿಸಿ-Dismiss lawyers rehired in APP recruitment
2014 ರಲ್ಲಿ ಸರ್ಕಾರಿ ವಕೀಲರ ನೇಮಕಾತಿ ಪ್ರಕರಣ ಲೋಕಾಯುಕ್ತದಲ್ಲಿ ತನಿಖಾ ನಡೆಯುತ್ತಿದ್ದರು ಅಮಾನತ್ತುಗೊಂಡ 61 ಜನರಲ್ಲಿ 6 ಜನರ ವಜಾವನ್ನ ಸರ್ಕಾರ ವಾಪಾಸ್ ಪಡೆದು ಮರು ನೇಮಕಾತಿ ಮಾಡಿಕೊಂಡಿರುವ ಬಗ್ಗೆ ವಕೀಲ ರವಿಕುಮಾರ್ ಆಕ್ಷೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಕುರಿತು ಮೊದಲು ತನಿಖೆ ನಡೆಸಿದ ಲೋಕಾಯುಕ್ತರು ವರದಿ ಮೌಲ್ಯಮಾಪನದಲ್ಲಿ ಜಿಲ್ಲಾ ನ್ಯಾಯಾಧೀಶರ ನಡೆಸಿದ್ದು ಅವರ ಸಹಿಯನ್ನ ಫೋರ್ಜರಿ ಮಾಡಲಾಗಿದೆ. ಮಾರ್ಕ್ಸ್ ಕಾರ್ಡನ್ನೇ ಬದಲಾಯಿಸಲಾಗಿದೆ. ಕೊಠಡಿ ಮೇಲ್ವಿಚರಕರ ಪೋರ್ಜರಿಯಾಗಿದೆ. ಜಿಲ್ಲಾ ನ್ಯಾಯಾಧೀಶರು ಸಹಿ ನನ್ನದಲ್ಲ ಎಂದು ಹೇಳಿಕೆ ನೀಡಿದ್ದರು.
ಅವರ ಹೇಳಿಕೆ ಬೆನ್ನಲ್ಲೇ 61 ಜನ ಸರ್ಕಾರಿ ವಕೀಲರ ನೇಮಕಾತಿ ರದ್ದಾಗಿದೆ. ಎಲ್ಲಾ ಪ್ರಕರಣ ಡಿಸ್ಮಿಸ್ ಮಾಡಲಾಗಿದೆ. ವಜಾಗೊಂಡಿದ್ದ 6 ಜನ ಸರ್ಕಾರಿ ವಕೀಲರನ್ನ ಸರ್ಕಾರ ನರು ನೇಮಕಾತಿಗೆ ಮುಂದಾಗಿದೆ. ಸೆ.16 ರಂದು ಸರ್ಕಾರ ಈ ಆದೇಶ ಹೊರಡಿಸಿದೆ. ಲೋಕಾಯುಕ್ತ ಇಲಾಖಾ ತನಿಖೆ ನಡೆಯುತ್ತಿರುವ ವೇಳೆ ವಜಾಗೊಂಡಿದೆ. ಎಪಿಪಿ ನೇಮಕಾತಿಗೆ 197 ಜನರನ್ನ ಕರೆಯಲಾಗಿತ್ತು. ರದ್ದುಗೊಳಿಸಿದ ವಜಾವನ್ನ ಸರ್ಕಾರ ವಾಪಾಸ್ ಪಡೆಯಬೇಕು ಎಂದರು.
Dismiss lawyers rehired in APP recruitment

