SUDDILIVE || SHIVAMOGGA
ರೈಲಿನಲ್ಲಿ ಸಂಚರಿಸುವಾಗ ಮರೆತುಹೋಗಿದ್ದ ಬ್ಯಾಗ್ ಮರು ಮಾಲಿಕನ ಕೈಗೆ ಸೇರಿದ್ದು ಹೇಗೆ?How a bag forgotten on a train ended up in the hands of its owner
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಜನಶತಾಬ್ದಿಯಲ್ಲಿ ಸಿಕ್ಕ ಬ್ಯಾಗ್ವೊಂದನ್ನ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ ವಾಪಸ್ ಮಾಡಿದ್ದಾರೆ.
ಜನಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್ವೊಂದನ್ನ ತಾವು ಪ್ರಯಾಣಿಸಿದ್ದ ಬೋಗಿಯಲ್ಲಿಯೇ ಮರೆತು ಬಿಟ್ಟಿದ್ದರು. ಈ ನಡುವೆ ಆರ್ಪಿಎಫ್ ಸಿಬ್ಬಂಧಿ ರೈಲಿನಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಈ ಬ್ಯಾಗ್ ಸಿಕ್ಕಿದೆ. ಬ್ಯಾಗ್ನ್ನು ಪರಿಶೀಲಿಸಿದಾಗ ಅದರಲ್ಲಿ 1,11,900 ರೂ. ಮೌಲ್ಯದ ಆಪಲ್ ಲ್ಯಾಪ್‌ಟಾಪ್, 10,000 ರೂ. ಮೌಲ್ಯದ ಕಾಸ್ಮೆಟಿಕ್ಸ್ ಹಾಗೂ 2,000 ರೂ. ನಗದು ಸೇರಿದಂತೆ ಒಟ್ಟು 1,23,900 ರೂ. ಮೌಲ್ಯದ ವಸ್ತುಗಳಿದ್ದವು. ಬಳಿಕ ಬ್ಯಾಗ್ನ್ನ ತಮ್ಮ ಕಚೇರಿಗೆ ಕೊಂಡೊಯ್ದ ಸಿಬ್ಬಂದಿ, ಲಭ್ಯ ಮಾಹಿತಿಯಡಿಯಲ್ಲಿ ಅದರ ಮಾಲೀಕರನ್ನು ಪತ್ತೆ ಮಾಡಿ ಅವರಿಗೆ ಬ್ಯಾಗ್ ಹಿಂತಿರುಗಿಸಿದೆ. ರೈಲ್ವೆ ರಕ್ಷಣಾ ದಳದ ಕಾರ್ಯಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
How a bag forgotten on a train ended up in the hands of its owner

