SUDDILIVE ||SHIVAMOGGA
ಈದ್ ಮೆರವಣಿಗೆಗೆ ಚಾಲನೆ, ಜಾರಿಯಾಗದ ಬದಲೀ ರಸ್ತೆ ಮಾರ್ಗ, ವಾಹನ ಸವಾರರ ಪರದಾಟ-Eid procession begins, alternative road route not implemented, traffic chaos
ಈದ್ ಮೆರವಣಿಗೆ ಗಾಂಧಿ ಬಜಾರ್ ನ ಸುನ್ನಿ ಜಾಮೀಯ ಮಸೀದಿಯಿಂದ ಹೊರಟಿದೆ. ಪ್ರವಾದಿ ಪೈಗಂಬರ್ ಅವರ 1500 ನೇ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಗಾಂಧಿಬಜಾರ್ ನ ಸುನ್ನಿ ಜಾಮಿಯಾ ಮಸೀದಿಯಿಂದ ಹೊರಟ ಮೆರವಣಿಗೆ ಗಾಂಧಿ ಬಜಾರ್ 2ನೇ ಕ್ರಾಸ್, ನಾಗಪ್ಪನ ಕೇರಿ,ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ -ಓಲ್ಡ್ ಬಾರ್ ಲೈನ್ ರಸ್ತೆ - ಪೆನ್ಷನ್ ಮೊಹಲ್ಲಾ-ಬಾಲ್ ರಾಜ್ ಅರಸ್ ರಸ್ತೆ-ಮಹಾವೀರ ಸರ್ಕಲ್- ಗೋಪಿ ಸರ್ಕಲ್- ನೆಹರು ರಸ್ತೆ- ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ -ಅಶೋಕ ಸರ್ಕಲ್-ಎನ್ ಟಿ ರಸ್ತೆ -ಗುರುದೇವ ರಸ್ತೆ -ರ್ಕ್ಲಾಕ್ ಪೇಟೆ, ನೂರಾನಿ ಮಸೀದಿ ಕೆಆರ್ ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ ತಲುಪಲಿದೆ.
ಭಾರಿ ಜನಸ್ತೋಮದೊಂದಿಗೆ ಮೆರಣಿಗೆ ಹೊರಟಿದೆ. ರಸ್ತೆಗಳು ಮೆರವಣಿಗೆ ಹಿನ್ನಲೆಯಲ್ಲಿ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಅಮೀರ್ ಅಹಮದ್ ವೃತ್ತ, ಗೋಪಿ ವೃತ್ತದಲ್ಲಿ ಬ್ಯಾರಿ ಕೇಡ್ ನಿರ್ಮಿಸಲಾಗಿದೆ ಇದರಿಂದ ರಸ್ತೆ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಕಳೆದ ಬಾರಿ ರಸ್ತೆ ಸಂಚಾರದ ಬದಲೀ ವ್ಯವಸ್ಥೆಯನ್ನ ಮೆರೆವಣಿಗೆಗಾಗಿ ಜಾರಿ ಮಾಡಲಾಗಿತ್ತು. ಈ ಬಾರಿ ಜಿಲ್ಲಾಡಳಿತ ಬದಲೀ ರಸ್ತೆ ಮಾರ್ಗ, ಪಾರ್ಕಿಂಗ್ ವ್ಯವಸ್ಥೆಯನ್ನ ಕಲ್ಪಿಸದೆ ಇರುವುದು ಅಚ್ಚರಿ ಮೂಡಿಸಿದೆ.
Eid procession begins, alternative road route not implemented, traffic chaos

