SUDDILIVE || BHADRAVATHI
ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ-ಕಿಕ್ಕಿರಿದ ಜನ-Hindu Mahasabha Ganapati Rajbeedi procession in Bhadravati - Crowded
ಭದ್ರಾವತಿಯಲ್ಲಿ ಹಿಂದೂಮಹಾಸಭಾ ಗಣಪತಿ ವಿಸರ್ಜನಾ ಮೆರವಣೆಗೆ ನಡೆದಿದೆ. ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ತಮ್ಮ ಭಕ್ತಪರಾಕಾಷ್ಠೆಯನ್ನ ಮೆರೆದಿದ್ದಾರೆ.
ಹೊಸಮನೆಯಿಂದ ಇಂದು ಬೆಳಿಗ್ಗೆ ಸುಮಾರು 11-45 ಕ್ಕೆ ಹೊರಟ ಗಣಪತಿಯನ್ನ ಸಂಜೆ 8 ಗಂಟೆಯವೇಳೆಗೆ ಭದ್ರಾವತಿ ನಗರ ಸಭೆ ಎದುರಿನ ಜಾಗದ ಭದ್ರ ಹೊಳೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಹೊಸಮನೆ, ಶಿವಾಜಿ ಸರ್ಕಲ್ ಸಂತೆ ಸರ್ಕಲ್ ರಂಗಪ್ಪ ವೃತ್ತ ಹುತ್ತ ಕಾಲೋನಿ, ಅಪ್ಪಾಜಿ ಗೌಡ ಪೆಟ್ರೋಲ್ ಬಂಕ್, ರೈಲ್ವೆ ನಿಲ್ದಾಣದ ಮೂಲಕ ಸೇತುವೆ ದಾಟಿ ತರೀಕೆರೆ ರಸ್ತೆಯಲ್ಲಿ ಬರುವ ಭದ್ರಾವತಿ ನಗರಸೌಎ ಎಸುರು ವಿಸರ್ಜನೆಯಾಗಲಿದೆ.
ಶಾಸಕ ಬಿಕೆ ಸಂಗಮೇಶ್ವರ್, ಗಣಪತಿ ಆಶೀರ್ವಾದ ಪಡೆದು ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಸಾರ್ವಜನಿಕರು ಮೆರವಣಿಗೆಗೆ ಬಂದಿದ್ದ ಗಣೇಶ್ ಅವರನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಭಕ್ತರು ಹೆಚ್ಚಾಗಿ ಭಾಗಿಯಾಗಿರುವುದು ವಿಶೇಷವಾಗಿದೆ.
