ಚಲಿಸುತ್ತಿದ್ದ ಕಾರಿನ ಮೇಲೆ ಉರುಳಬಿದ್ದ ಮಾವಿನ ಮರ- Mango tree fell on a moving car

SUDDILIVE || SHIVAMOGGA

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಬಿದ್ದ ಮಾವಿನ ಮರ-Mango tree fell on a moving car

Mango, car


ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಚಿನ್ನಮನೆ-ಮಂಡಘಟ್ಟದ ಬಳಿ ಮಧ್ಯಾಹ್ನ ಘಟನೆ ಸಂಭವಿಸಿದೆ.


ಕಾರು ಶಿವಮೊಗ್ಗ ಕಡೆಯಿಂದ ಆಯನೂರು ಮಾರ್ಗವಾಗಿ ರಿಪ್ಪನ್‌ಪೇಟೆ ಕಡೆಗೆ ತೆರಳುತಿತ್ತು. ಹೆದ್ದಾರಿಯಲ್ಲಿ ಸಾಗುವಾಗ ಮಾವಿನ ಮರ ಉರುಳಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿವಾಗಿದೆ. ಕೂಡಲೆ ಸ್ಥಳೀಯರು, ಇತರೆ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಯನೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕಾರಿನ ಮೇಲ್‌ ಸಂಪೂರ್ಣ ಹಾನಿಯಾಗಿದ್ದು, ಗಾಜುಗಳು ಒಡೆದು ಹೋಗಿವೆ. 


ಮೂವರು ದೊಡ್ಡವರು ಇಬ್ವರು ಮಕ್ಕಳಿದ್ದ ಕಾರಿನಲ್ಲಿ ಓರ್ವ ಮಹಿಳಾ ಪ್ರಯಾಣಿಕರಿಗೆ ತೀವ್ರಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗದ ಲಯನ್ ಸಫಾರಿಯಿಂದ ಬೈಂದೂರು ಕಡೆಗೆ ಈ ಕಾರು ಚಲಿಸುತ್ತಿದ್ದು, ಮಂಡಘಟ್ಟ ಬಳಿ ಅವಘಡ ಸಂಭವಿಸಿದೆ. ಪ್ರಕರಣ ಕುಂಸಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Mango tree fell on a moving car

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close