SUDDILIVE || BHADRAVATHI
ಐಜಿಪಿ, ಎಸ್ಪಿ, ಡಿಸಿ ಸೈಡ್ ಲೈನ್? ಡಿಕೆಶಿಯಿಂದ ಭದ್ರೆಗೆ ಬಾಗಿನ-IGP, SP, DC sideline, DKSHI turns to Bhadre
ಭದ್ರಾವತಿಯ ಬಿಆರ್ ಪಿಗೆ ಇಂದು ಜಲಸಂಪನ್ಮೂಲ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ತುಂಬಿದ ಭದ್ರೆಗೆ ಬಾಗಿನ ಅರ್ಪಿಸಿದರು.
186 ಅಡಿ ನೀರು ಸಙಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ 185 ಅಡಿ ನೀರು ಸಂಗ್ರಹವಾಗಿದ್ದು ಇಂದು ಡಿಕೆಶಿ ಬಾಗಿನ ಅರ್ಪಿಸಿರುವುದು ವಿಶೇಷವಾಗಿತ್ತು. ಇವರಿಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಜಯಚಂದ್ರ ಮತ್ತು ದಾವಣಗೆರೆ ಸಂಸದೆ ಡಾ.ಶಾಮನೂರು ಶಿವಶಂಕರಪ್ಪ, ಶಾಸಕ ಬಿಕೆ ಸಂಗಮೇಶ್ವರ್, ಶಿವಮೊಗ್ಗದ ಹೆಚ್ ಸಿ ಯೋಗೀಶ್ ಮತ್ತಿತರರು ಸಾಥ್ ನೀಡಿದರು.
ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಐಜಿಪಿ ಎಸ್ಪಿ ಡಿಸಿ ಅವರೆ ಸೈಡ್ ನಲ್ಲಿ ನಿಂತಿದ್ದು ಕಾರ್ಯಕ್ರಮಕ್ಕೆ ಕೈಹಿಡಿದಿರುವ ಸಂಗತಿ ಕಂಡು ಬಂದಿದೆ. ಬಾಗಿನ ಮತ್ತು ಬಿಆರ್ ಪಿಯಲ್ಲಿ ನೂತನ ಐಬಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೈಡ್ ನಲ್ಲಿ ನಿಲ್ಲಿಸಿ ಕಾರ್ಯಕ್ರಮ ನಡೆಸಿರುವುದು ರಾಜಕೀಯ ಜನಪ್ರತಿನಿಧಿಗಳ ಮೈಲುಗೈ ಸೂಚಿಸುತ್ತದೆ. ಡಿಕೆಶಿ ಭಾಷಣದಲ್ಲಿಯೇ ಅವರು ಅವರನ್ನ ವೇದಿಕೆಗೆ ಕರೆಯಿಸದೆ ಇರುವುದು ದುರಂತವಾಗಿತ್ತು.
ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆಶಿ ಕುರಿತು ಹಾಡು
ಬಿಆರ್ ಪಿಯಲ್ಲಿ ಬಾಗಿನ ಅರ್ಪಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆ ಸಾಹೇಬನ ಹಾಡಿನ ಅಬ್ಬರ ಜೋರಾಗಿತ್ತು. ಇದು ಸಹ ಕಾನೂನು ಬಾಹಿರವಾಗಿದ್ದರೂ ಯಾವುದೇ ಕಾರ್ಯಕ್ರಮ ಉಲ್ಲಂಘನೆಯಾಗಿಲ್ಲ.
IGP, SP, DC sideline, DKSHI turns to Bhadre

